ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ 

ಶಿವಮೊಗ್ಗ : ಸಾಗರದ ಎಂಡಿಎಫ್ ಸಾಮಾನ್ಯ ಸಭೆಯಲ್ಲಿ ಎಂಡಿಎಫ್ ಪ್ರಧಾನ ಕಾರ್ಯದರ್ಶಿ ಜಗದೀಶ ಗೌಡ ಮೇಲೆ ಹಲ್ಲೆ ನಡೆದಿತ್ತು. ಈ ಸಂಬಂಧ ಪೋಲಿಸರು ಹಲ್ಲೆ ನಡೆಸಿದವರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ ಎಂದು ಹಲ್ಲೆಗೊಳಗಾದ ಜಗದೀಶ್ ಗೌಡ ಮಾಧ್ಯಮಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಶಾಸಕರ ಎದುರಲ್ಲೇ ಹಲ್ಲೆ ನಡೆಯುವಾಗ ಪೊಲೀಸರು ಕೂಡ ಅಲ್ಲಿದ್ದರು. ಅವರು ನಮಗೆ ಯಾವುದೇ ಸಹಕಾರ ನೀಡಿಲ್ಲ. ಆ ನಂತರವೂ ಕೂಡ ಈ ಸಂಬಂಧ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನು ಎರಡು ಮೂರು ದಿನಗಳ ಒಳಗಾಗಿ ಎಫ್‌ಐಆರ್ ದಾಖಲಿಸ ಬೇಕು. ಇಲ್ಲವಾದಲ್ಲಿ ತೀರ್ಥಹಳ್ಳಿಯಲ್ಲಿನ ಗೃಹ ಸಚಿವರ ಮನೆ ಮುಂಭಾಗ ಹಾಗೂ ಎಸ್‌ಪಿ ಕಚೇರಿ ಆವರಣದಲ್ಲಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.