ಬೆಂಗಳೂರು : ಕೋವಿಡ್ ಕುರಿತ ನಿಬಂಧಗಳ ಸಡಿಲಿಕೆ ಕುರಿತಾಗಿ ಇಂದು ಸಿಎಂ ನೇತೃತ್ವದಲ್ಲಿ ತಜ್ಞರ ಸಭೆ ನಡೆಯಿತು. ಈ ಕುರಿತಾಗಿ ಸಭೆಯಲ್ಲಿ ನಿಬಂಧಗಳನ್ನ ಸಡಿಲಿಕೆ ಮಾಡುವ ಬಗ್ಗೆ ತೆಗೆದುಕೊಂಡಿರುವ ನಿರ್ಧಾರಗಳ ಕುರಿತಾಗಿ ಮಾಹಿತಿ ನೀಡಿದ ಕಂದಾಯ ಸಚಿವ ಆರ್ ಅಶೋಕ್, ಜನವರಿ 31ರಿಂದ ರಾಜ್ಯಾದ್ಯಂತ ನೈಟ್ ಕರ್ಫ್ಯೂ ತೆರವು ಮಾಡಲು ತೀರ್ಮಾನಿಸಿಲಾಗಿದೆ.
ಬೆಂಗಳೂರಿನಲ್ಲಿ ಸೋಮವಾರದಿಂದ ಭೌತಿಕ ತರಗತಿಗಳನ್ನು ಪ್ರಾರಂಭಿಸಲು ಸರ್ಕಾರ ನಿರ್ಧರಿಸಿದೆ. ಪಬ್, ಬಾರ್, ರೆಸ್ಟೋರೆಂಟ್, ಹೊಟೇಲ್‌ಗಳಲ್ಲಿ ಶೇಕಡ 100ರಷ್ಟು ಅನುಮತಿ ನೀಡಲಾಗಿದೆ. ಸಭೆ ಸಮಾರಂಭಕ್ಕೆ ಒಳಾಂಗಣ ಮಿತಿ 100 ಮಂದಿಯಿಂದ 200ಕ್ಕೆ ಏರಿಕೆ ಮಾಡಲಾಗಿದೆ. ಹೊರಾಂಗಣ ಮಿತಿಯನ್ನು 200ರಿಂದ 300ಕ್ಕೆ ಏರಿಕೆ ಮಾಡಲಾಗಿದೆ. ಆದ್ರೆ ಸಿನಿಮಾ ಥಿಯೇಟರ್, ಸ್ವಿಮ್ಮಿಂಗ್ ಪೂಲ್, ಜಿಮ್‌ಗಳಲ್ಲೂ ಶೇಕಡಾ ೫೦ ರಷ್ಟು ಮಿತಿ ಮುಂದುವರಿಕೆಯಾಗಲಿದೆ