ಶಿವಮೊಗ್ಗದಲ್ಲಿ ಆರಂಭವಾಗಿದೆ ಹೊಸ ಚಿಕಿತ್ಸೆ

ಶಿವಮೊಗ್ಗ : ದೇಹದಲ್ಲಿನ ಕುತ್ತಿಗೆ ನೋವು, ಬೆನ್ನು ನೋವು, ಜಾಯಿಂಟ್ ಪೇನ್ ಹಾಗೂ ಮಂಡಿ ನೋವುಗಳನ್ನು ಯಾವುದೇ ಸರ್ಜರಿಯಿಲ್ಲದೆ ಗುಣಪಡಿಸುವಂತಹ ಹೊಸ ಕ್ಲಿನಿಕ್ ಒಂದು ಶಿವಮೊಗ್ಗದಲ್ಲಿ ಆರಂಭವಾಗಿದೆ.

ಈ ಕುರಿತು ಮಾಧ್ಯಮಗೋಷ್ಠಿ ನಡೆಸಿದ ಡಾ.ನರೇಂದ್ರ, ಇಂಟರ್‌ವೆನ್ಷನಲ್ ಪೇನ್ ಮ್ಯಾನೇಜ್‌ಮೆಂಟ್ ಎಂಬ ಹೊಸ ಪದ್ಧತಿಯ ಮೂಲಕ ಯಾವುದೇ ಸರ್ಜರಿಯಿಲ್ಲದೆ ನೋವುಗಳಿಂದ ಗುಣಮುಖರಾಗಲು ಸಾಧ್ಯವಿದೆ. ದೇಶದ ಪ್ರಮುಖ ನಗರಗಳಲ್ಲಿ ಮಾತ್ರ ಈ ರೀತಿಯ ಚಿಕಿತ್ಸೆಯ ಸೌಲಭ್ಯವಿದೆ. ಇದೀಗ ಮೊದಲ ಬಾರಿಗೆ ಮಲೆನಾಡಿನಲ್ಲಿಯೂ ಈ ಸೌಲಭ್ಯ ದೊರೆಯಲಿದೆ ಎಂದು ಮಾಹಿತಿ ನೀಡಿದರು.