ಅವಧಿ ಮುಗಿದಿದ್ದ ಪಂಚಾಯಿತಿಗಳಿಗೆ ಹೊಸ ಸದಸ್ಯರು

ಶಿವಮೊಗ್ಗ : ಅವಧಿ ಮುಕ್ತಾಯಗೊಂಡಿದ್ದ ಕುಂಸಿ, ಪುರದಾಳು ಹಾಗೂ ಹಾರೋಗೊಪ್ಪ ಗ್ರಾಮ ಪಂಚಾಯಿತಿಗಳಿಗೆ ನೂತನ ಸದಸ್ಯರು ಆಯ್ಕೆಯಾಗಿದ್ದಾರೆ. ಈ ಪಂಚಾಯಿಗಳಿಗೆ ಚುನಾವಣೆ ನಡೆದಿದ್ದು, ಡಿಸೆಂಬರ್ 30ರಂದು ಫಲಿತಾಂಶ ಹೊರಬಿದ್ದಿದೆ.

ಪುರದಾಳು ಗ್ರಾಮ ಪಂಚಾಯಿತಿಗೆ ಕಮಲಾಕ್ಷಿ, ವೈ.ಕುಸುಮ, ಪ್ರದೀಪ್.ಎಸ್.ಹೆಬ್ಬೂರ್, ಭಾರತಿ ನಾಗರಾಜ, ಜಿ.ಮಾನಸ ಸತೀಶ್, ಲಕ್ಷ್ಮೀಬಾಯಿ, ಜಿ.ರಾಮಣ್ಣ, ನಾಗವೇಣಿ.ಕೆ ಹಾಗೂ ಎಸ್.ಆರ್.ಗಿರೀಶ್ ಸೇರಿ 9 ನೂತನ ಸದಸ್ಯರು ಆಯ್ಕೆಯಾಗಿದ್ದಾರೆ.

ಹಾಗೆಯೆ ಕುಂಸಿ ಗ್ರಾಮ ಪಂಚಾಯಿತಿಗೆ ಕೆ.ಹೆಚ್. ಕೇಶವಮೂರ್ತಿ, ಸತ್ಯಾವತಿ, ಕೆ.ಪಿ.ಶಾರದ, ಮಂಜುನಾಥ್.ಹೆಚ್.ಆರ್, ರಾಜೇಶ್ವರಿ, ಶೈಲಾ.ಎಸ್, ಕೆ.ಎಲ್.ಪುಷ್ಪ, ಇಂತಿಯಾಜ್ ಭಾಷ, ಗುರುಮೂರ್ತಿ.ಕೆ.ಆರ್, ಶಾಹೀದ ಬೇಗಂ, ಸನಾವುಲ್ಲಾ, ಚಂದ್ರಮ್ಮ, ಬಿ.ಶ್ರೀನಿವಾಸ್, ಚನ್ನಮ್ಮ.ಬಿ.ಎಲ್, ಆಂಜನೇಯ.ಸಿ, ಹಾಗೂ ರೂಪ.ಆರ್ ಸೇರಿದಂತೆ 16 ಹೊಸ ಸದಸ್ಯರು ಆಯ್ಕೆಯಾಗಿದ್ದಾರೆ.

ಇದೇ ರೀತಿಯಾಗಿ ಹಾರೋಗೊಪ್ಪ ಗ್ರಾಮಪಂಚಾಯಿತಿಗೆ ಗಂಗೂಬಾಯಿ, ಸುಬ್ರಮಣ್ಯ, ಅಶೋಕ್.ಹೆಚ್.ಜಿ, ನೀಲಾಬಾಯಿ, ಕವಿತ, ಶಿವಮ್ಮ, ಜಗದೀಶ, ಎಸ್.ಬಿ.ಪಾಟೀಲ್, ಕವಿತ, ನಾಗರಾಜ, ಶಿವಮ್ಮ, ಗಿರೀಶ್ ನಾಯ್ಕ್, ಗಾಯಿತ್ರಿ ಬಾಯಿ ಹಾಗೂ ಅಶೋಕ್ ಕುಮಾರ್ ಸೇರಿದಂತೆ 14 ಹೊಸ ಗ್ರಾಮಪಂಚಾಯಿತಿ ಸದಸ್ಯರು ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.