ಮನೆಯಲ್ಲಿ ತಿಥಿ ಕಾರ್ಯ ಮಾಡಿದವರಿಗೆ ಶಾಕ್!

ತೀರ್ಥಹಳ್ಳಿ : ರಾಜ್ಯದ ಕೊನೆಯ ನಕ್ಸಲ್ ಕೊಂಡಿ ಪ್ರಭಾ ಕೊನೆಗೂ ಪೊಲೀಸರಿಗೆ ಶರಣಾಗಿದ್ದಾಳೆ. ೨೦ ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಕಾಡಿಮೇಡು ಅಲೆಯುತ್ತ ನಕ್ಸಲ್ ಸಂಘಟನೆಯನ್ನು ಬಲಗೊಳಿಸುತ್ತಿದ್ದ ಪ್ರಭಾ, ತೀರ್ಥಹಳ್ಳಿ ತಾಲೂಕಿನ ಆಗುಂಬೆ ಹೋಬಳಿಯ ಹೊಸಗದ್ದೆಯವಳು. ಇವಳು ಪ್ರಾಥಮಿಕ ಶಿಕ್ಷಣವನ್ನು ಹೊಸಗದ್ದೆಯಲ್ಲಿ ಮುಗಿಸಿ ನಂತರ ಪ್ರೌಢ ಶಿಕ್ಷಣವನ್ನು ಆಗುಂಬೆಯ ಎಸ್‌ವಿಎಸ್ ಪೂರ್ಣಗೊಳಿಸಿದ್ದಳು. ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣವನ್ನು ಪಡೆದಿದ್ದ ಪ್ರಭಾ, ಪಗ್ರತಿಪರ ಹೋರಾಟಗಳಲ್ಲಿ ಸಕ್ರಿಯವಾಗಿದ್ದಳು.

ಕರ್ನಾಟಕ ವಿಮೋಚನಾ ರಂಗ, ಮಹಿಳಾ ಜಾಗೃತಿ ಸಂಘಟನೆಗಳಲ್ಲಿ ಸಕ್ರಿಯಾರಾಗಿದ್ದುಕೊಂಡೇ ಭೂಗತಳಾಗಿ ಪಶ್ಚಿಮಘಟ್ಟ ಮತ್ತು ಕರಾವಳಿ ಸರಹದ್ದಿನಲ್ಲಿ ನಕ್ಸಲ್ ಚಟುವಟಿಕೆ ವಿಸ್ತರಿಸುವ ಮುಂಚೂಣಿಯಲ್ಲಿದ್ದಳು. ಬೇರೆ ಬೇರೆ ಹೆಸರುಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದಳು. ನಕ್ಸಲ್ ನಾಯಕನಾಗಿದ್ದ ಬಿ. ಜಿ.ಕೃಷ್ಣಮೂರ್ತಿ ಪತ್ನಿಯಾಗಿದ್ದ ಪ್ರಭಾ ಅಸ್ತಮಾದಿಂದ ಬಳಲುತ್ತಿದ್ದಳು. ಕೇರಳದಲ್ಲಿ ಇತ್ತೀಚೆಗಷ್ಟೇ ಬಿ.ಜಿ.ಕೃಷ್ಣಮೂರ್ತಿ ಬಂಧನಕ್ಕೊಳಾಗಿದ್ದ. ಇದಾದ ನಂತರ 2010ರ ಅಗಸ್ಟ್ 19ರಂದು ಪ್ರಭಾ ಮೃತಪಟ್ಟದ್ದಳು ಅಂತ ಹೇಳಲಾಗ್ತಾ ಇತ್ತು. ಇದಕ್ಕೆ ಪೂರಕವಾಗುವಂತೆ ಹೇಳಿಕೆಗಳನ್ನೂ ನೀಡಲಾಗಿತ್ತು. ಆಕೆಯ ಮನೆಯವರು ತಿಥಿ ಕಾರ್ಯವನ್ನೂ ಕೂಡ ಮಾಡಿದ್ರು. ಆದ್ರೆ, ಈಗ ಪ್ರಭಾ ಶರಣಾಗಿರುವುದು ಎಲ್ಲರಿಗೂ ಆಶ್ಚರ್ಯ ಉಂಟು ಮಾಡಿದೆ. ಪ್ರಭಾ ತಮಿಳುನಾಡಿನ ತಿರಪ್ಪತ್ತೂರು ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾಳೆ. ಪತಿಯ ಬಂಧನ ಮತ್ತು ತೀವ್ರವಾಗಿ ಕಾಡುತ್ತಿದ್ದ ಆನಾರೋಗ್ಯವೇ ಪ್ರಭಾಳ ಶರಣಾಗತಿಗೆ ಕಾರಣ ಎಂದು ಹೇಳಲಾಗ್ತಾ ಇದೆ.