ಎನ್.ಟಿ.ರಸ್ತೆ ಉರ್ದು ಶಾಲೆ ವಿದ್ಯಾರ್ಥಿಗಳ ಪ್ರತಿಭಟನೆ 

ಶಿವಮೊಗ್ಗ : ಶಾಲೆಯ ಮುಖ್ಯೋಪಾದ್ಯಯರು ಅವಾಚ್ಯ ಶಬ್ದಗಳಿಂದ ಬೈಯುತ್ತಾರೆ. ದೈಹಿಕವಾಗಿ ಹಲ್ಲೆ ನಡೆಸುತ್ತಾರೆ. ಹಾಗೇನೆ ಸರಿಯಾಗಿ ಶಾಲೆಗೆ ಬರುವುದಿಲ್ಲ ಎಂದು ಆರೋಪಿಸಿ ಎನ್.ಟಿ.ರಸ್ತೆಯ ಉರ್ದು ಶಾಲೆಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ರು.

ವಿದ್ಯಾರ್ಥಿಗಳ ಪೋಷಕರು ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿ ಮುಖ್ಯ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ರು. ಸ್ಥಳಕ್ಕೆ ಆಗಮಿಸಿದ ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ವಿದ್ಯಾರ್ಥಿಗಳ ದೂರಿನ ಅನ್ವಯ ತನಿಖೆ ನಡೆಸಲಾಗುವುದು.

ಹೀಗಾಗಿ ಮುಖ್ಯೋಪಾಧ್ಯಯರನ್ನು ರಜೆಯ ಮೇಲೆ ಕಳುಹಿಸಲಾಗುವುದು. ಜೊತೆಗೆ ಸದ್ಯ ಶಾಲೆಯಲ್ಲಿನ ಹಿರಿಯ ಶಿಕ್ಷಕರು ಮುಖ್ಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದ್ರು.