ಶಿವಮೊಗ್ಗ : ಏಪ್ರಿಲ್ 24ರಂದು ಪಂಚಾಯತ್ ರಾಜ್ ದಿವಸ್ ಕಾರ್ಯಕ್ರಮವನ್ನ ಪ್ರಧಾನಿ ನರೇದ್ರ ಮೋದಿ ಶಿವಮೊಗ್ಗದಲ್ಲಿ ಆಚರಿಸುವ ಸಾಧ್ಯತೆಯಿತೆ. ಈ ಕುರಿತು ಪ್ರಧಾನಮಂತ್ರಿ ಕಾರ್ಯಾಲಯ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದೆ.
ಪ್ರಧಾನಿ ಭದ್ರತೆ, ಸಮಯದ ಹೊಂದಾಣಿಕೆ ರಸ್ತೆ ಮಾರ್ಗದ ವಾಹನ ದಟ್ಟಣೆ ಎಲ್ಲವನ್ನೂ ಗಮನಿಸಿ, ಹೊಳಲೂರು ಗ್ರಾಮ ಪಂಚಾಯಿತಿ ಅಥವಾ ಕೊಮ್ಮನಾಳ್ ಗ್ರಾಮ ಪಂಚಾಯಿತಿಗೆ ಮೋದಿ ಭೇಟಿ ನೀಡುವ ಸಾಧ್ಯತೆಯಿದೆ. ಈ ಕುರಿತು ಜಿಲ್ಲಾಡಳಿತ ಪ್ರಧಾನಿ ಕಚೇರಿಗೆ ಮಾಹಿತಿ ನೀಡಲಿದೆ. ಇದಾದ ಬಳಿಕ ಪ್ರಧಾನಿ ಪ್ರವಾಸದ ಅಂತಿಮ ಮಾಹಿತಿ ಜಿಲ್ಲಾಡಳಿತದ ಕೈ ಸೇರುವುದಾಗಿ ತಿಳಿದು ಬಂದಿದೆ. ಅಂದ್ಹಾಗೆ ೨೦೧೮ರಲ್ಲಿ ಚುನಾವಣಾ ಪ್ರಚಾರಕ್ಕೆ ಮೋದಿ ಶಿವಮೊಗ್ಗಕ್ಕೆ ಆಗಮಿಸಿದ್ದರು.