ಶಿವಮೊಗ್ಗ : ಸ್ಮಾರ್ಟ್ ಸಿಟಿ ಕಾಮಗಾರಿಗಳ ಪರಿಶೀಲನೆ ನಡೆಸಲು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಸಿಟಿ ರೌಂಡ್ಸ್ ನಡೆಸಿದ್ರು. ನಗರದ ವಿವಿಧೆಡೆ ತೆರಳಿ ಕಾಮಗಾರಿಗಳ ಪರಿಶೀಲನೆ ನಡೆಸಿದ್ರು. ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣದಿಂದ ಆಲ್ಕೋಳ ರಸ್ತೆ, ಸುವರ್ಣ ಸಂಸ್ಕೃತಿ ಭವನ, ಶಿವಶಂಕರ್ ಗ್ಯಾರೇಜ್ ಹಿಂಭಾಗದ ಕನ್ಸರ್‌ವೆನ್ಸಿ, ಮಿಷನ್ ಕಾಂಪೌಂಡ್ ಪಾರ್ಕ್, ಫ್ರೀಡಂ ಪಾರ್ಕ್, ಚಾನಲ್ ಮುಂಭಾಗ, ಮಾಸ್ತಾಂಬಿಕ ಪಾರ್ಕ್, ಮಲ್ಲೇಶ್ವರ ನಗರ ಪಾರ್ಕ್, ಫ್ಯಾಮಿಲಿ ವೆಲ್‌ಫೇರ್ ಪಾರ್ಕ್‌ಗಳಲ್ಲಿ ಪರಿಶೀಲನೆ ನಡೆಸಿದರು.
ಬೆಳಗ್ಗೆಯಿಂದಲೇ ಸ್ಮಾರ್ಟ್ ಸಿಟಿ ಕಚೇರಿಯಿಂದ ಪರಿಶೀಲನಾ ಕಾರ್ಯ ಆರಂಭಿಸಲಾಗಿತ್ತು. ಮೇಯರ್ ಸುನೀತಾ ಅಣ್ಣಪ್ಪ, ಆಡಳಿತ ಪಕ್ಷದ ನಾಯಕ ಎಸ್.ಎನ್.ಚನ್ನಬಸಪ್ಪ, ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಸೇರಿದಂತೆ ಹಲವರು ಪರಿಶೀಲನಾ ತಂಡದಲ್ಲಿದ್ದಾರೆ.