ಶಿವಮೊಗ್ಗ : ಮಹಿಳಾ ದಿನಾಚರಣೆಯ ಪ್ರಯುಕ್ತ ಮೆಟ್ರೋ ಆಸ್ಪತೆಯಲ್ಲಿನ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಮೆಟ್ರೋ ಕಪ್ ಕ್ರಿಕೆಟ್ ಪಂದ್ಯಾವಳಿ ನಡೆಯಿತು.
ಜೆ.ಎನ್.ಎನ್.ಸಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಪಂದ್ಯಾವಳಿಯಲ್ಲಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳ ಹಲವು ತಂಡಗಳು ಭಾಗಿಯಾಗಿದ್ದವು. ಮಹಿಳೆಯರು ಕೂಡ ನಾವು ಯಾರಿಗೂ ಕಡಿಮೆ ಇಲ್ಲ ಎನ್ನುವ ಹಾಗೆ ಬ್ಯಾಟಿಂಗ್, ಬೌಲಿಂಗ್ ಮಾಡಿ ಮಿಂಚಿದರು. ನಿತ್ಯವೂ ರೋಗಿಗಳ ಸೇವೆ, ಒತ್ತಡದಲ್ಲಿಯೇ ಕೆಲಸ ಮಾಡ್ತಾ ಇದ್ದವರಿಗೆ ಕ್ರಿಕೆಟ್ ಪಂದ್ಯಾವಳಿ ಕೊಂಚ ರಿಲ್ಯಾಕ್ಸ್ ಮೂಡಿಸಿದೆ.