ಶಿವಪ್ಪನಾಯಕ ಸರ್ಕಲ್ ಬಳಿ ಫುಟ್ಪಾತ್ನಲ್ಲಿ ಹೂ ಮಾರುವವರು ತಮ್ಮ ಅಂಗಡಿಗಳನ್ನು ತೆರವುಗೊಳಿಸಬೇಕು ಎಂದು ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಸೂಚಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ಸ್ಮಾರ್ಟ್ ಸಿಟಿ ವತಿಯಿಂದ ಇಲ್ಲಿ ಮಲ್ಟಿ ಲೆಯರ್ ಕಾರ್ ಪಾರ್ಕಿಂಗ್ ಪ್ರಾಜೆಕ್ಟ್ ಅನುಷ್ಠಾನ ಮಾಡಲಾಗುತ್ತಿದೆ. ಅಲ್ಲದೆ ಸ್ಮಾರ್ಟ್ ರೋಡ್ ಕೂಡ ಮಾಡಲಾಗುತ್ತಿದೆ. ಇಲ್ಲಿ ಫುಟ್ಪಾತ್ನಲ್ಲೇ ಹೂವು ಮತ್ತಿತರೆ ಸಾಮಗ್ರಿ ಮಾರುತ್ತಿರುವುದರಿಂದ ಟ್ರಾಫಿಕ್ ಸಮಸ್ಯೆ ಜೊತೆಗೆ ಕಾಮಗಾರಿಗೂ ಅಡ್ಡಿಯಾಗುತ್ತಿದೆ. ಹಾಗಾಗಿ ಭಾನುವಾರ ಸಂಜೆಯೊಳಗೆ ತಾವೇ ತೆರವು ಮಾಡುವುದಾಗಿ ವ್ಯಾಪಾರಿಗಳು ಹೇಳಿದ್ದಾರೆ ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.