ದಿವಂಗತ ಡಿ.ಎಸ್.ನಾಗಭೂಷಣ್ ನೆನಪು 

ಶಿವಮೊಗ್ಗ : ಸಾಹಿತಿ, ಚಿಂತಕ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಿ.ಎಸ್.ನಾಗಭೂಷಣ್ ಮೇ ೧೯ ರಂದು ನಮ್ಮನೆಲ್ಲ ಅಗಲಿದ್ದರು. ಈ ಹಿನ್ನೆಲೆ ಅವರಿಗೆ ನಮನ ಸಲ್ಲಿಸುವ ಕಾರ್ಯಕ್ರಮ ನಡೆಯಿತು.

ಸರ್ಕಾರಿ ನೌಕರರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿ.ಎಸ್.ನಾಗಭೂಷಣ್ ಅವರಿಗೆ ಪುಷ್ಪ ನಮನ. ನುಡಿ ನಮನ ಹಾಗೂ ನಾದಮಣಿ ನಾಲ್ಕೂರರಿಂದ ಸ್ವರ ನಮನ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಡಿ.ಎಸ್.ನಾಗಭೂಷಣ್ ಅವರ ಬಂಧುಗಳು, ಸ್ನೇಹಿತರು, ಹಿತೈಶಿಗಳು ಹಾಗೂ ಅಭಿಮಾನಿಗಳು ನಾನಾ ಭಾಗಗಳಿಂದ ಆಗಮಿಸಿದ್ದರು.