ಬೆಂಗಳೂರು : ಇಂಧನ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನಸಾಮಾನ್ಯರಿಗೆ ಮತ್ತೊಂದು ಸುತ್ತಿನ ಬೆಲೆ ಏರಿಕೆ ಬಿಸಿ ತಾಗಲಿದೆ. ಹೌದು, ಏಪ್ರಿಲ್ ಒಂದರಿಂದ ಹೊಸ ಆರ್ಥಿಕ ವರ್ಷ ಆರಂಭವಾಗಲಿರುವ ಹಿನ್ನೆಲೆ ನಾನಾ ಅಗತ್ಯ ವಸ್ತುಗಳ ಬೆಲೆಯೂ ಕೂಡ ಏರಿಕೆಯಾಗಿದೆ.
ಅಗತ್ಯ ಔಷಧಗಳ ದರದಲ್ಲಿ ಶೇಕಡಾ 11 ರಷ್ಟು ಏರಿಕೆಯಾಗಲಿದೆ. ಅಗತ್ಯ ಔಷಧಿಗಳ ಪಟ್ಟಿಯಲ್ಲಿರುವ ಸುಮಾರು 800 ಔಷಧಗಳ ದರ ಏರಿಕೆಯಾಗಲಿದೆ. ಅದೇ ರೀತ ಉಕ್ಕು, ಹೊಟೇಲ್ ತಿಂಡಿ, ಮನೆ ಖರೀಧಿ, ಕಾರುಗಳು ದುಬಾರಿಯಾಗಲಿವೆ.