ಸಾಗರ : ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಹಾಗೂ ಶಿವಮೊಗ್ಗ ಹರ್ಷ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಹಕ್ರೆ ಆಗ್ರಹಿಸಿದ್ರು.
ಈ ಕುರಿತು ಸಾಗರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಇತ್ತೀಚೆಗೆ ದಿನಗಳಲ್ಲಿ ಇಂಥಹ ದಿನಗಳಲ್ಲಿ ಈ ಪ್ರಕರಣಕ್ಕೆ ಮಾತ್ರ ಇಷ್ಟು ಶೀಘ್ರವಾಗಿ ಬಿ ರಿಪೋರ್ಟ್ ಸಲ್ಲಿಸಲಾಗಿದೆ. ಅಧಿಕಾರಿದಲ್ಲಿ ಇದ್ದವರಿಗೆ ರಕ್ಷಣೆ ಕೊಡಲು ಬಿ ರಿಪೋರ್ಟ್ ಹಾಕಲಾಗಿದೆ. ಇದರ ಹಿಂದೆ ಪೊಲೀಸರ ಮೇಲೆ ಸರ್ಕಾರದ ಒತ್ತಡವಿದೆ. ಒಂದು ರೀತಿಯಾಗಿ ಈ ಕೊಲೆಯನ್ನು ಸರ್ಕಾರವೇ ಮಾಡಿದ ಹಾಗಿದೆ. ಆದ್ದರಿಂದ ಪ್ರಕರಣವನ್ನು ಸಿಬಿಐಗೆ ವಹಿಸಬೇಕು.
ಹಾಗೇನೆ ಹರ್ಷ ಕೊಲೆ ಆರೋಪಿಗಳಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾಥಿತ್ಯ ಸಿಗ್ತಾಯಿದೆ ಅಂದ್ರೆ ಅದರ ಹಿಂದೆಯೂ ಅಧಿಕಾರಸ್ಥರ ಕೈವಾಡವಿದೆ. ಹೀಗಾಗಿ ಈ ಪ್ರಕರಣವನ್ನು ಕೂಡ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದ್ರು.