ಶಿವಮೊಗ್ಗ : ಆಗಸ್ಟ್ ೭ರಿಂದ ಆಗಸ್ಟ್ ೨೨ರವರೆಗೆ ನಡೆಯಲಿರುವ ಮಹಾರಾಜ ಟ್ರೋಫಿಯಲ್ಲಿ ಶಿವಮೊಗ್ಗ ತಂಡ ಕೂಡ ಭಾಗಿಯಾಗಲಿದೆ ಎಂದು ಕೆ.ಎಸ್.ಸಿ.ಎ ಶಿವಮೊಗ್ಗ ವಲಯದ ಸಮನ್ವಯಕಾರ ಡಿ.ಎಸ್.ಅರುಣ್ ತಿಳಿಸಿದ್ರು.
ಟೂರ್ನಿ ಕುರಿತು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಟೂರ್ನಿಯಲ್ಲಿ ಆರು ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಪ್ರತಿಯೊಂದು ತಂಡವು ಆಯಾ ಪ್ರದೇಶದ ಇಬ್ಬರು ಆಟಗಾರರನ್ನು ಒಳಗೊಂಡಿರಬೇಕಾಗಿರುವುದರಿಂದ ಶಿವಮೊಗ್ಗದ ಆಟಗಾರರಿಗೆ ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಭಾಗವಹಿಸಿಲು ಉತ್ತಮ ಅವಕಾಶ ಇದೆ ಎಂದರು.
ಇದೇ ಸಂದರ್ಭದಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಿರುವ ಮಹಾರಾಜ ಟ್ರೋಫಿ ಪ್ರದರ್ಶನ ಮಾಡಲಾಯಿತು. ಈ ಟ್ರೋಫಿ ೧೧ ರೆಕ್ಕೆಗಳನ್ನು ಹೊಂದಿದ್ದು, ಕ್ರಿಕೆಟ್ ತಂಡದಲ್ಲಿರುವ ಒಟ್ಟು ಆಟಗಾರರನ್ನು ಪ್ರತಿನಿಧಿಸುವಂತಿದೆ.