ವಿಜೃಂಭಣೆ ದಸರಾಗೆ ಮಹಾನಗರ ಪಾಲಿಕೆ ತಯಾರಿ

ಹೈಲೆಟ್ಸ್ : 

ವಿಜೃಂಭಣೆ ದಸರಾಗೆ ಮಹಾನಗರ ಪಾಲಿಕೆ ತಯಾರಿ
ಪದ್ಮಶ್ರೀ ಪುರಸ್ಕೃತ ತುಳಸಿ ಗೌಡರಿಂದ ದಸರಾ ಉದ್ಘಾಟನೆ
ನಗರದ ಫ್ರೀಡಂ ಪಾರ್ಕಿನಲ್ಲಿ ವಿವಿಧ ಕಾರ್ಯಕ್ರಮ ಆಯೋಜನೆ
ಮಹಿಳಾ ದಸರಾ, ಮಕ್ಕಳ ದಸರಾ, ಸಾಂಸ್ಕೃತಿಕ ದಸರಾ
ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ ಮಾಹಿತಿ 

ಶಿವಮೊಗ್ಗ : ಈ ಬಾರಿಯ ದಸರಾವನ್ನು ವಿಜೃಂಭಣೆಯಿಂದ ಆಚರಿಸಲು ಮಹಾನಗರ ಪಾಲಿಕೆ ತಯಾರಿ ನಡೆಸಿಕೊಂಡಿದ್ದು ಇದಕ್ಕಾಗಿ ೧೪ ತಂಡವನ್ನು ರಚಿಸಲಾಗಿದೆ ಎಂದು ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ ಹೇಳಿದರು. ಶಿವಮೊಗ್ಗ ದಸರಾ ಕಾರ್ಯಕ್ರಮದ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಸೆಪ್ಟಂಬರ್ ೨೬ ರಂದು ತಾಯಿ ಚಾಮುಂಡಿಯನ್ನು ದುರ್ಗಮ್ಮ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಿವುದರ ಮೂಲಕ ದಸರಾ ಉದ್ಘಾಟನೆ ಆಗಲಿದೆ. ಈ ಕಾರ್ಯಕ್ರಮವನ್ನು ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ ಉದ್ಘಾಟಿಸಲ್ಲಿದ್ದಾರೆ.  

ನಂತರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸೆಪ್ಟಂಬರ್ ೨೬ ಮತ್ತು ಸೆಪ್ಟಂಬರ್ ೨೭ ರಂದು  ನಗರದ ಫ್ರೀಡಂ ಪಾರ್ಕಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಹಾಗೇನೆ ಸೆಪ್ಟಂಬರ್ ೨೭ ರಂದು ನಗರದ ಗೋಪಿ ವೃತ್ತದಿಂದ ಫ್ರೀಡಂ ಪಾರ್ಕಿನವರೆಗೆ ಮಹಿಳಾ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ನಂತರ ಮಕ್ಕಳ ದಸರಾದ ಬಗ್ಗೆ ಮತನಾಡಿದ ಮೇಯರ್, ಮಕ್ಕಳ ದಸರಾದಲ್ಲಿ ಸುಮಾರು ಐದು ಸಾವಿರ ಮಕ್ಕಳು ಭಾಗವಹಿಸಿ, ಜಾಥವನ್ನು ನಡೆಸಲಿದ್ದಾರೆ.  ಹಾಗೆಯೇ ಮಕ್ಕಳಿಗಾಗಿ ರಾಜ್ಯಮಟ್ಟದ ಸ್ಕೇಟಿಂಗ್ ಹಾಗೂ ಕರಾಟೆ ಪಂದ್ಯಾವಳಿ ಆಯೋಜನೆ ಮಾಡಲಾಗಿದೆ. ಇವೆಲ್ಲದರ ಜೊತೆಗೆ ಸಾಂಸ್ಕೃತಿಕ ದಸರಾ, ಯೋಗ ದಸರಾ, ರೈತ ದಸರಾ, ಪರಿಸರ ದಸರಾ, ಅಹಾರ ದಸರಾವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಇನ್ನು ಇದೇ ವೇಳೆ ದಸರಾ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.