ಹೊನ್ನಾಳಿ : ಮದರಸಾಗಳನ್ನ ಬ್ಯಾನ್ ಮಾಡಬೇಕು. ಅಲ್ಲಿ ಎಳೆ ಮಕ್ಕಳಿಗೆ ದೇಶ ದ್ರೋಹದ ಪಾಠ ಮಾಡಲಾಗುತ್ತದೆ. ಅವರು ಮುಂದೆ ಭಾರತ್ ಮಾತಾ ಕೀ ಜೈ ಅನ್ನಲ್ಲ ಎಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಆಗ್ರಹ ಪಡಿಸಿದ್ದಾರೆ.
ರಾಜ್ಯದಲ್ಲಿ ಶಾಲೆಗಳು ಇಲ್ಲವಾ? ಮದರಸಾದಲ್ಲಿ ಏನು ಪಾಠ ಮಾಡಲಾಗುತ್ತದೆ? ಮುಖ್ಯಮಂತ್ರಿಗಳು ಮದರಸಾಗಳನ್ನ ಬ್ಯಾನ್ ಮಾಡಬೇಕು. ಹಿಜಾಬ್ ವಿವಾದ ಹುಟ್ಟಿಸಿದ್ದು ಜಮೀರ್ ಅಹ್ಮದ್, ಖಾದರ್ ಹಾಗೂ ಇತರ ದೇಶ ದ್ರೋಹಿ ಸಂಘಟನೆಗಳು. ರಾಜ್ಯದಲ್ಲಿ ಈಗಾಗಲೇ ಹಿಜಾಬ್ ಬಗ್ಗೆ ಹೈಕೋರ್ಟ್ ತೀರ್ಪು ನೀಡಿದೆ. ಈ ನೆಲದ ಕಾನೂನಿಗೆ ಪ್ರತಿಯೊಬ್ಬರು ಬೆಲೆ ಕೊಡಬೇಕು. ಆದರೂ ಸದನದಲ್ಲಿ ಕಾಂಗ್ರೆಸ್ ನವರು ಹಿಜಾಬ್ ಪ್ರಸ್ತಾಪ ಮಾಡಿದ್ದಾರೆ. ಅದರ ಪರವಾಗಿ ಮಾತಾಡಿದ್ದಾರೆ ಎಂದು ಶಾಸಕ ರೇಣುಕಾಚಾರ್ಯ ಕಿಡಿಕಾರಿದ್ದಾರೆ.