ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಆರೋಗ್ಯ ಕಾಳಜಿಗೆ ಹೆಚ್ಚಿನ ಆದ್ಯತೆ: ಸಂಸದ ತೇಜಸ್ವಿ ಸೂರ್ಯ

ಶಿವಮೊಗ್ಗದ ಹೊಯ್ಸಳ ಸೊಸೈಟಿಗೆ ಸಂಸದ ತೇಜಸ್ವಿ ಸೂರ್ಯ ಭೇಟಿ ನೀಡಿದ್ರು.

ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸರ್ಕಾರ ಶಾಲೆ ಓಪನ್‌ಗೆ ತಜ್ಞರ ಸಮಿತಿ  ರಚನೆ ಮಾಡಿದೆ. ಕೋವಿಡ್‌ನಿಂದ ಕಳೆದ ಒಂದು ವರ್ಷಗಳ ಕಾಲ ಶಾಲೆ ಮುಚ್ಚಿದ್ದಾರೆ. ಮಕ್ಕಳು ಹೊರಗಡೆ ಹೋಗದೆ ಸೋಷಿಯಲ್ ಸ್ಕಿಲ್ಸ್ ಮರೆತಿದ್ದಾರೆ. ನಾವು ಎಷ್ಟೇ ಆನ್‌ಲೈನ್ ಕ್ಲಾಸ್ ಮಾಡಿದ್ರು ಸಹ ಮಕ್ಕಳು ಶಾಲೆಯಲ್ಲಿ ಓದಿದರೆ ಒಳ್ಳೆಯದು. ಆಫ್‌ಲೈನ್ ಕ್ಲಾಸ್‌ನಲ್ಲಿ ಕಲಿಯೋದು ತುಂಬಾನೆ ಇದೆ. ಮಕ್ಕಳಿಗೆ ಸೂಕ್ತವಾದಂತಹ ಸುರಕ್ಷತೆಯನ್ನು ತಲೆಯಲ್ಲಿ ಇಟ್ಕೊಂಡು, ಇದರ ಜೊತೆಗೆ ಮಕ್ಕಳ ವಿದ್ಯಾಭ್ಯಾಸ, ಆರೋಗ್ಯದ ಬಗ್ಗೆ ಗಮನ ಹರಿಸುತ್ತೇವೆ ಎಂದರು.

ಇನ್ನು ರಾಜ್ಯಕ್ಕೆ ಅರುಣ್ ಸಿಂಗ್ ಭೇಟಿ ವಿಚಾರದ ಕುರಿತು ಪ್ರತಿಕ್ರಿಯಿಸಿ, ಅವರು ರಾಜ್ಯದ ಪ್ರಭಾರಿಗಳು. ಅವರು ರಾಜ್ಯಕ್ಕೆ ಬಂದಾಗ ಎಲ್ಲಾ ಕಡೆ ಭೇಟಿ ಮಾಡ್ತಾರೆ. ನಮ್ಮ ಸಂಘನಾಟಾತ್ಮಕ ಪ್ರವಾಸ ಅಷ್ಟೇ. ಅವರು ಎಲ್ಲಾ ಜಿಲ್ಲೆಗಳಿಗು ಸಹ ಭೇಟಿ ನೀಡ್ತಾರೆ ಎಂದರು.