ಕರೋನ ಕಾಟ ವ್ಯಾಪಾರಸ್ಥರಿಗೆ ನಷ್ಟ

ಶಿವಮೊಗ್ಗ : ಕರೋನ ಮಹಾಮಾರಿಯಿಂದಾಗಿ ವ್ಯಾಪಾರಸ್ಥರ ಬಾಳು ಹೈರಾಣಾಗಿ ಹೋಗಿದೆ. ಹೌದು, ಸಾಮಾನ್ಯವಾಗಿ ಹಬ್ಬಗಳ ಸಂದರ್ಭದಲ್ಲಿ ಹೂ, ಹಣ್ಣು ವ್ಯಾಪಾರಿಗಳಿಗೆ ವ್ಯಾಪಾರ ಜಾಸ್ತೀನೆ ಆಗುತ್ತೆ.

ಆದ್ರೆ ಈ ಬಾರಿ ಸಂಕ್ರಾಂತಿ ಹಬ್ಬ ಇದ್ದರು ಕೂಡ ವ್ಯಾಪಾರವಿಲ್ಲದೆ ವ್ಯಾಪಾರಸ್ಥರು ಬೇಸರವಾಗಿದ್ದಾರೆ. ದೂರದ ಊರಿನಿಂದ ಬಂಡವಾಳ ಹಾಕಿಕೊಂಡು ವ್ಯಾಪಾರ ಮಾಡಲು ಬಂದಿರುವ ವ್ಯಾಪಾರಿಗಳು ಕೂಡ ವಿಕೇಂಡ್ ಕರ್ಫ್ಯೂನಿಂದಾಗಿ ನಷ್ಟ ಅನುಭವಿಸುವಂತಾಗಿದೆ. ಕಳೆದ ಒಂದು ವರ್ಷದಿಂದ ಸುಧಾರಿಸಿಕೊಳ್ಳುತ್ತಿದ್ದವರು, ಇದೀಗ ವೀಕೆಂಡ್ ಕರ್ಫ್ಯೂಗೆ ನಲುಗಿ ಹೋಗಿದ್ದಾರೆ.