ಸೈನ್ಸ್ ಲ್ಯಾಬ್‌ಗೆ ಸ್ಥಳ ಪರಿಶೀಲನೆ 

ಶಿವಮೊಗ್ಗ : ಇಲ್ಲಿ ನೂತನವಾಗಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಸೈನ್ಸ್ ಲ್ಯಾಬ್‌ಗೆ ಸ್ಥಳ ಪರಿಶೀಲನೆ ನಡೆಸಲಾಗಿದೆ. ದೆಹಲಿಯಿಂದ ಬಂದಿದ್ದ ಒಂದು ತಂಡ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಸ್ಥಳ ಪರಿಶೀಲನೆ ಮಾಡಿದ್ದಾರೆ.

ರಾಗಿಗುಡ್ಡದ ಇಎಸ್‌ಐ ಆಸ್ಪತ್ರೆಯ ಪಕ್ಕದ ಜಾಗ ಹಾಗೂ ಸಹ್ಯಾದ್ರಿ ಕಾಲೇಜಿನ ಮುಂಭಾಗದಲ್ಲಿರುವ ಜಾಗಕ್ಕೆ ತಂಡ ಭೇಟಿ ನೀಡಿದೆ. ಈ ವೇಳೆ ರಾಜ್ಯ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ, ಕುವೆಂಪು ವಿವಿ ಕುಲಸಚಿವೆ ಅನುರಾಧ ಹಾಗೂ ಮತ್ತಿತರರು ಉಪಸ್ಥಿತರಿದ್ದರು.