ಎಂ.ಪಿ.ರೇಣುಕಾಚಾರ್ಯಗೆ ಜೀವ ಬೆದರಿಕೆ ಕರೆ 

ಹೊನ್ನಾಳಿ : ಮದರಸ ಶಾಲೆಗಳನ್ನು ರಾಜ್ಯದಲ್ಲಿ ಬಂದ್ ಮಾಡಬೇಕು ಹಾಗೂ ಹಲಾಲ್ ಮಾಂಸವನ್ನು ಹಿಂದೂಗಳು ಬಹಿಷ್ಕಾರ ಮಾಡಬೇಕೆಂದು ಹೇಳಿಕೆ ನೀಡ್ತಾಯಿದ್ದ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯಗೆ ಜೀವ ಬೆದರಿಕೆ ಕರೆ ಬಂದಿದೆ.

ಶಾಸಕರಿಗೆ ಫೋನ್ ಮಾಡಿರುವ ಅನಾಮದೇಯ ವ್ಯಕ್ತಿ ನೀನು ಹಿಜಾಬ್ ಬಗ್ಗೆ ಮಾತಾಡ್ತಿಯಾ, ಹಲಾಲ್ ಕಟ್ ಬಾರದು, ಎಂದು ಹೇಳುವುದಕ್ಕೆ ನಿನ್ಯಾರೋ? ಎಂದು ಅವಾಜ್ ಹಾಕಿದ್ದಾರೆ. ಜೊತೆಗೆ ಶಾಸಕರಿಗೆ ಅವಾಚ್ಯ ಶಬ್ಧಗಳಿಂದ ನಿಂಧಿಸಿದ್ದಾನೆ. ಈ ಸಂಬಂಧ ಎಂ.ಪಿ.ರೇಣುಕಾಚಾರ್ಯ ಪೊಲೀಸ್ ದೂರು ನೀಡಿದ್ದಾರೆ. ಈ ವೇಳೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಹಿಂದುತ್ವ ಹಾಗೂ ಭಾರತ ಮಾತೆಗೆಗಾಗಿ ನಾನು ಎಲ್ಲವಕ್ಕು ಸಿದ್ಧನಾಗಿದ್ದೇನೆ. ಇಂತಹ ಬೆದರಿಕೆ ಕರೆಗಳಿಗೆ ನಾನು ಹೆದರುವುದಿಲ್ಲ ಎಂದಿದ್ದಾರೆ.