ಸಿದ್ದರಾಮಯ್ಯ ರಾಜಕೀಯ ನೀವೃತ್ತಿ ತೆಗೆದುಕೊಳ್ಳಲಿ : ಕೆಎಸ್‌ಈ 

ಶಿವಮೊಗ್ಗ : ಸಿದ್ದರಾಮಯ್ಯ ರಾಜಕೀಯ ನೀವೃತ್ತಿ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಕಾಂಗ್ರೆಸ್ ಪಕ್ಷವೇ ವಜಾಗೊಳಿಸಬೇಕೆಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು. ಹಾಗೂ ಈ ಕುರಿತು ಡಿ.ಕೆ.ಶಿವಕುಮಾರ್ ಹೈಕಮಾಂಡ್‌ಗೆ ಶಿಫಾರಸ್ಸು ಮಾಡಬೇಕೆಂದು ವ್ಯಂಗ್ಯ ಸಲಹೆ ನೀಡಿದರು.

ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಹಿಜಾಬ್‌ಅನ್ನು ಹಿಂದೂ ಸ್ವಾಮೀಜಿಗಳ ಖಾವಿ ಬಟ್ಟೆಗೆ ಹೋಲಿಸಿದ್ದಾರೆ. ಈ ಮೂಲಕ ಹಿಂದೂಗಳು ಹಾಗೂ ಹಿಂದೂ ಸ್ವಾಮೀಜಿಗಳನ್ನು ಅಗೌರವಿಸಿದ್ದಾರೆ. ಸಿದ್ದರಾಮಯ್ಯ ರಾಜಕೀಯ ತೆವಲು ತೀರಿಸಿಕೊಳ್ಳಲು ಸಾಧು ಸಂತರ ವಿರುದ್ಧ ಮಾತನಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.