ಕರೋನ ನಿವಾರಣೆಯಾಗಲೆಂದು ಸಂಸದ ಬಿ.ವೈ. ರಾಘವೇಂದ್ರ ಪ್ರಾರ್ಥನೆ

ಶಿಕಾರಿಪುರ : ಶಿಕಾರಿಪುರದಲ್ಲಿ ನಡೆಯುತ್ತಿರುವ ಸಾಂಪ್ರದಾಯಿಕ ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಕುಟುಂಬ ಸಮೇತ ಭಾಗಿಯಾಗಿ ದೇವರಿಗೆ ಪೂಜೆ ಸಲ್ಲಿಸಿದರು.

ಈ ಪ್ರಪಂಚಕ್ಕೆ ಬಂದಿರುವ  ಕರೋನ ರೋಗವು ಬೇಗ ನಿವಾರಣೆಯಾಗಿ ತಾಯಿ ಮಾರಿಕಾಂಬೆಯು ಎಲ್ಲರಿಗೂ ಆರೋಗ್ಯವನ್ನು ಕರುಣಿಸಲಿ. ಸಮೃದ್ಧ ಮಳೆ - ಬೆಳೆ ಆಗಲಿ ಹಾಗೂ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಲಿ ಎಂದು ಸಂಸದರು ಪ್ರಾರ್ಥಿಸಿದರು.

ಈ ವೇಳೆ ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗುರುಮೂರ್ತಿ, ಪುರಸಭಾ ಅಧ್ಯಕ್ಷೆ ಲಕ್ಷ್ಮಿ ಮಹಲಿಂಗಪ್ಪ, ಜಾತ್ರಾ ಸಮಿತಿ ಅಧ್ಯಕ್ಷ ಮಹೇಶ್ ಹಾಗೂ ದೇವಸ್ಥಾನ ಸಮಿತಿಯ ಸದಸ್ಯರು ಸಂಸದರಿಗೆ ಸಾಥ್ ನೀಡಿದರು.