ಕೋವಿಡ್ ಕುರಿತು ಕುಮಾರ್ ಬಂಗಾರಪ್ಪ ಸಭೆ 

ಸೊರಬ : ಸೊರಬದ ತಾಲೂಕು ಕಚೇರಿಯಲ್ಲಿ ಕೋವಿಡ್‌ಗೆ ಸಂಬಂಧಿಸಿದಂತೆ ಶಾಸಕ ಕುಮಾರ್ ಬಂಗಾರಪ್ಪ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದುಕೊಂಡರು.

ಈ ವೇಳೆ ಸಭೆಯಲ್ಲಿ ಮಾತನಾಡಿದ ಅವರು, ಬೂಸ್ಟರ್ ಡೋಸ್ ಲಸಿಕೆಯನ್ನ ಮೊದಲು ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರು, ಶಿಕ್ಷಕರು ಹೀಗೆ ಎಲ್ಲಾ ಸರಕಾರಿ ನೌಕರರಿಗೆ ನೀಡಬೇಕು. ನಂತರ ಕಾಂಟ್ರಾಕ್ಟ್ ಬೇಸಿಸ್‌ನಲ್ಲಿ ಕೆಲಸ ಮಾಡಿತ್ತಿರುವವರಿಗೆ ನೀಡಬೇಕು. ನಂತರ ಸರ್ಕಾರದ ಎಸ್‌ಒಪಿ ಪ್ರಕಾರ ಎಲ್ಲರಿಗೂ ಲಸಿಕೆ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.