ಶಿವಮೊಗ್ಗ : ಮಕ್ಕಳೇ ಅಭಿನಯಿಸಿ ನೃತ್ಯ ಮಾಡಿರುವ ಹಾಗೂ ಶಿವಮೊಗ್ಗ ಸ್ಟೈಲ್‌ಡ್ಯಾನ್ಸ್ ಕ್ಲಬ್ ನಿರ್ಮಾಣ ಹಾಗೂ ಶಶಿಕುಮಾರ್ ಕುಮಾರ್ ಎನ್. ನಿರ್ದೇಶನದಲ್ಲಿ ಮೂಡಿಬಂದಿರುವ ಕೃಷ್ಣಲವಾಷ್ಠಮಿ ಹಾಡು ಜನವರಿ 15ರಂದು ಬಿಡುಗೆಯಾಗಲಿದೆ.
ಈ ಕುರಿತಾಗಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಹಾಡಿನ ನಿರ್ದೇಶಕ ಶಶಿಕುಮಾರ್, ಮಕ್ಕಳಿಗೆ ಕೇವಲ ನಾಲ್ಕು ಗೋಡೆಯ ನಡುವೆ ಡ್ಯಾನ್ಸ್ ಕಲಿಸುವುದಕ್ಕಿಂತ ಅವರು ಹೊಸ ವಿಷಯಗಳನ್ನ ಕಲಿಯಬೇಕು ಎನ್ನುವ ಉದ್ದೇಶದಿಂದ ಈ ವರ್ಷ ಈ ಹೊಸ ಪ್ತಯತ್ನವನ್ನ ಮಾಡಿದ್ದೇವೆ. ಸಾತ್ವಿಕ್ ಹಾಗೂ ಲಹರಿ ಈ ಹಾಡಿನ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಶಿವಮೊಗ್ಗದ ಸುಂದರ ಪರಿಸರದಲ್ಲಿಯೇ ಹಾಡಿನ ಸಂಪೂರ್ಣ ಶೂಟಿಂಗ್ ಮಾಡಲಾಗಿದೆ. ಇದೀಗ ಜನವರಿ ೧೫ರಂದು ಈ ಆಲ್ಬಂ ಸಾಂಗ್ ಸ್ಟೈಲ್‌ಡ್ಯಾನ್ಸ್ ಕ್ಲಬ್ ಶಿವಮೊಗ್ಗ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಯಾಗಲಿದೆ. ಎಲ್ಲರೂ ಹಾಡನ್ನ ಅತೀ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿಬೇಕೆಂದು ಮನವಿ ಮಾಡಿಕೊಂಡರು.