ಕೂಡ್ಲಿ : ಸಂಗಮೇಶ್ವರ ಜಾತ್ರೆ ಅದ್ದೂರಿಯಿಂದ ನಡೆಯುತ್ತಿದೆ. ಜಾತ್ರೆಯ ಎರಡನೇ ದಿನದಂದು ರಥೋತ್ಸವ ಕಾರ್ಯಕ್ರಮ ಆರಂಭವಾಗಿದೆ. ಇಲ್ಲಿ ಪ್ರತಿವರ್ಷ ಯುಗಾದಿಯ ದಿನದಿಂದ ಮೂರು ದಿನಗಳ ಕಾಲ ಜಾತ್ರೆ ನಡೆಯುತ್ತದೆ.
ಕೂಡ್ಲಿ ಸುತ್ತಮುತ್ತಲಿನ ನೂರಾರು ಗ್ರಾಮದ ದೇವತೆಗಳು ಆಗಮಿಸಿ ತುಂಗ ಭದ್ರಾ ಸಂಗಮದಲ್ಲಿ ಪೂಜೆ ಸಲ್ಲಿಸಿ, ಸಂಗಮೇಶ್ವರನ ದರ್ಶನ ಪಡೆದು ವಾಪಸ್ ಆಗುತ್ತಾರೆ ಎನ್ನುವುದು ಜನರ ನಂಬಿಕೆ. ಜಾತ್ರೆಯಂದು ಭಕ್ತರು ತುಂಗಾ, ಭದ್ರ ನದಿಯ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ ಸಂಗಮೇಶ್ವರನ ದರ್ಶನ ಪಡೆದು ಪುನೀತರಾಗುತ್ತಾರೆ.