ವಿವಾದದಲ್ಲಿ ಕಾಲಿವುಡ್ ಬ್ಯೂಟಿ ಸಾಯಿ ಪಲ್ಲವಿ

ದೇಶದಲ್ಲಿ ಪ್ರತಿದಿನವು ಒಂದಿಲ್ಲ ಒಂದು ಕಾರಣಕ್ಕೆ ಗಲಭೆಗಳು, ಕೋಮು ದಳ್ಳುರಿಗಳು ನಡೆಯುತ್ತಲೆ ಇವೆ. ಈ ನಡುವೆ ನಟಿ ಸಾಯಿ ಪಲ್ಲವಿ ನೀಡಿರುವ ಹೇಳಿಕೆಯೊಂದು ದೇಶದ್ಯಾಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಅವರ ಹೇಳಿಕೆಗೆ ಪರ ವಿರೋಧಗಳು ವ್ಯಕ್ತವಾಗುತ್ತಿದೆ. ಈ ಮಧ್ಯೆ ತಮ್ಮ ಹೇಳಿಕೆಗೆ ಸ್ಪಷ್ಟೀಕರಣವನ್ನು ಕೊಡವ ಕೆಲಸವನ್ನು ಕೂಡ ಸಾಯಿ ಪಲ್ಲವಿ ಮಾಡಿದ್ದಾರೆ. ಹಾಗಿದ್ರೆ, ಸಾಯಿ ಪಲ್ಲವಿ ನೀಡಿದ ಆ ವಿವಾದಾದ್ಮಕ ಹೇಳಿಕೆ ಏನು?. ಯಾಕೆ ಆ ಹೇಳಿಕೆಯನ್ನು ನೀಡಿದ್ರು? ಆ ಹೇಳಿಕೆಗೆ ಅವರು ನೀಡ್ತಾಯಿರುವ ಸ್ಪಷ್ಟನೆ ಏನು ಅನ್ನೋದರ ಕುರಿತಾಗಿ ಇಲ್ಲಿದೆ ಒಂದು ರಿಪೋರ್ಟ್.


ಕಾಲಿವುಡ್‌ನ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ. ಅವರ ಅಭಿನಯ ಹಾಗೂ ಬ್ಯೂಟಿಗೆ ಮರುಳಾಗದವರಿಲ್ಲ. ಚಿತ್ರದಲ್ಲಿ ಅಭಿನಯ ಮಾಡಲು ಕೂಡ ಒಂದಿಷ್ಟು ರೂಲ್ಸ್ ಅಂಡ್ ರೆಗ್ಯೂಲರೇಷನ್ ಹಾಕಿಕೊಂಡಿರೋ ಕಲಾವಿದೆ. ೨೦೧೫ರಲ್ಲಿ ಪ್ರೇಮಂ ಸಿನಿಮಾ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿಯಾದ ಅವರು, ತಮ್ಮ ಮೊದಲ ಚಿತ್ರಕ್ಕಾಗಿಯೇ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಪಡೆದುಕೊಂಡರು. ವೈದ್ಯಕೀಯ ಪದವಿಯನ್ನು ಪಡೆದುಕೊಂಡಿರುವ ಅವರು ಪ್ರೇಮಂ ಚಿತ್ರದ ಬಳಕ ಸಾಲು ಸಾಲ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಉತ್ತಮ ಡ್ಯಾನ್ಸ್‌ರ್ ಕೂಡ ಆಗಿರುವ ಸಾಯಿ ಪಲ್ಲವಿ ನೃತ್ಯಕ್ಕೆ ಈಗಾಗಲೇ ಎಲ್ಲರೂ ಫಿದಾ ಆಗಿದ್ದಾರೆ. ಹಾಗೇನೆ ಸಿನಿಮಾದಲ್ಲಿಯೂ ತಮ್ಮ ನೈಜ ಸೌಂದರ್ಯದಿಂದಲೇ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಒಮ್ಮೆ ಸಾಯಿ ಪಲ್ಲವಿ ಅವರು ನಾನು ಬ್ಯೂಟಿ ಪ್ರಾಡಕ್ಟ್‌ಗಳನ್ನು ಬಳಸುವುದಿಲ್ಲ. ನಿಮಗೆ ನಿಮ್ಮ ಮೇಲೆ ಹಾಗೂ ನಿಮ್ಮ ಬಣ್ಣದ ಮೇಲೆ ವಿಶ್ವಾಸವಿರಬೇಕು ಎಂದಿದ್ದರು. ಅದರಂತೆ ೨೦೧೯ರಲ್ಲಿ ೨ ಕೋಟಿಯ ಬ್ಯೂಟಿ ಫೇರ್‌ನೆಸ್ ಕ್ರೀಂ ಆಡ್ ಒಂದನ್ನು ತಿರಸ್ಕರಿಸಿದ್ದರು. ಈ ಮೂಲಕ ತಾವು ಆಡಿದ ಮಾತಿನಂತೆ ನಡೆದುಕೊಂಡಿದ್ದರು. ಆದ್ರೀಗೆ ಸಾಯಿಪಲ್ಲವಿಯರ ಮಾತೊಂದು ದೇಶದದ್ಯಾಂತ ತೀವ್ರ ಚರ್ಚೆಗೆ ಕಾರಣವಾಗಿದ್ದು ಪರ ವಿರೋಧಗಳು ವ್ಯಕ್ತವಾಗ್ತಾಯಿದೆ.

ಸಾಯಿ ಪಲ್ಲವಿ ಸದ್ಯ ಬಹುನಿರೀಕ್ಷೆಯ ವಿರಾಟ ಪವಂ  ಸಿನಿಮಾದ ಬಿಡುಗಡೆ ತಯಾರಿಯಲ್ಲಿದ್ದಾರೆ. ಈ ಸಿನಿಮಾದಲ್ಲಿ ಸಾಯಿ ಪಲ್ಲವಿ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ತೆಲುಗು ಸ್ಟಾರ್ ರಾಣಾ ದಗ್ಗುಬಾಟಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವಿರಾಟ ಪವಂ ಚಿತ್ರ ಜೂನ್ ೧೭ ರಂದು ಬಿಡಿಗಡೆಯಾಗುತ್ತಿದೆ. ಹಾಗಾಗಿ ಸಾಯಿ ಪಲ್ಲವಿ ಮತ್ತು ರಾಣಾ ದಗ್ಗುಬಾಟಿ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಸಾಯಿ ಪಲ್ಲವಿ ಸರಣಿ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಆದರೆ, ಇತ್ತೀಚೆಗೆ ಸಂದರ್ಶನವೊಂದರಲ್ಲಿ ಸಾಯಿ ಪಲ್ಲವಿಯ  ಕೆಲವು ಹೇಳಿಕೆಗಳು ಚರ್ಚೆಗೆ ಗ್ರಾಸವಾಗಿದೆ. 

ಹಾಗಿದ್ರೆ ಸಂದರ್ಶನದಲ್ಲಿ ವಿವಾದಕ್ಕೆ ಕಾರಣವಾದ ಸಾಯಿ ಪಲ್ಲವಿಯವರ ಹೇಳಿಕೆಯಾದ್ರು ಏನು?

"ನಾನು ಎಡ ಮತ್ತು ಬಲ ಅಂತ ಕೇಳಿದ್ದೇನೆ. ಆದರೆ ಎರಡರ ಬಗ್ಗೆಯೂ ನನಗೆ ಆಳವಾದ ಜ್ಞಾನವಿಲ್ಲ. ಆದರೆ ನಾನು ಮನುಷ್ಯತ್ವದ ಪರ ಮಾತನಾಡುತ್ತೇನೆ. ನನ್ನ ಮನೆಯಲ್ಲಿ ಕಲಿಸಿದ್ದು ನ್ಯೂಟ್ರಲ್ ನಿಯಮ. ಹಾಗಾಗಿ ಕಾಶ್ಮೀರದಲ್ಲಿ ಪಂಡಿತರ ಹತ್ಯೆಯನ್ನು ಹೇಗೆ ಧಾರ್ಮಿಕ ದೃಷ್ಟಿಕೋನದಿಂದ ನೋಡಲಾಯಿತೋ, ಹಾಗೆಯೇ ಲಾಕ್‌ಡೌನ್ ಸಮಯದಲ್ಲಿ ಗೋವುಗಳನ್ನು ಸಾಗಿಸುತ್ತಿದ್ದ ಮುಸ್ಲಿಂ ಟೆಂಪೋ ಡ್ರೈವರ್ ಮೇಲೆ ಜೈ ಶ್ರೀರಾಮ್ ಎಂದು ಹೇಳುತ್ತಾ ಕೊಚ್ಚಿಕೊಂದ ಘಟನೆಯನ್ನೂ ನಾನು ಹಾಗೆಯೇ ನೋಡಬೇಕಾಗುತ್ತದೆ. ಎರಡು ಹತ್ಯೆಯೂ ಒಂದೇ ನಾನು ಸಮಸಮಾಜದ ಕನಸು ಕಂಡಿರುವ ಹುಡುಗಿ. ನಾನು ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡುವುದಿಲ್ಲ. ಜಾತಿ, ಧರ್ಮಗಳ ಬಡಿದಾಟಕ್ಕೂ ನಾನು ಸಿದ್ಧಳಿಲ್ಲ. ಸಮಾಜದಲ್ಲಿ ಎಲ್ಲರೂ ಒಗ್ಗಟ್ಟಿನಿಂದಲೇ ಬದುಕಬೇಕು. ಧರ್ಮಗಳ ಕಚ್ಚಾಟ ಏಕೆ? ಯಾರದೋ ಲಾಭಕ್ಕಾಗಿ ಆಗುತ್ತಿರುವ ದಾಳಿಯಿದು ಅಂತ ನನಗೆ ಅನಿಸುತ್ತಿದೆ."

ಸಾಯಿ ಪಲ್ಲವಿಯರ ಇದೇ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಅವರ ವಿರುದ್ಧ ಹೈದರಾಬಾದ್‌ನಲ್ಲಿ ದೂರು ದಾಖಲಾಗಿದೆ. ಭಜರಂಗದಳ ಕಾರ್ಯಕರ್ತ ಅಖಿಲ್ ಎನ್ನುವವರು ಸಾಯಿಪಲ್ಲವಿ ವಿರುದ್ಧ ದೂರು ದಾಖಲಿಸಿದ್ದಾರೆ. ಇದರ ನಡುವೆ ಸಾಯಿ ಪಲ್ಲವಿ ನಟಿಸಿದ್ದ ವಿರಾಟಪವಂ ಚಿತ್ರವನ್ನು ಬಾಯ್ಕಾಟ್ ಮಾಡುವಂತೆ ಹಿಂದು ಸಂಘಟನೆಗಳು ಒತ್ತಾಯ ಮಾಡಿವೆ. ಆದ್ರೆ ನಟಿ ರಮ್ಯ ಸೇರಿದಂತೆ ಅನೇಕರು ಸಾಯಿ ಪಲ್ಲವಿಯರ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಾ ಇದ್ದಾರೆ.


ತಮ್ಮ ಹೇಳಿಗೆ ವಿವಾದ ರೂಪವನ್ನು ಪಡೆದುಕೊಳ್ಳುತ್ತಿದ್ದಂತೆ ಸಾಯಿ ಪಲ್ಲವಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡು ಮಾತನಾಡಿ ವಿಡಿಯೋ ಪೋಸ್ಟ್ ಮಾಡಿದ್ದಾರೆ

"ನಾನು ಇದೇ ಮೊದಲ ಬಾರಿಗೆ ಸ್ಪಷ್ಟನೆ ನೀಡಲು ನಿಮ್ಮ ಮುಂದೆ ಬರುತ್ತಿದ್ದೇನೆ. ನಾನು ಹೃದಯದಿಂದ ಮಾತನಾಡುವಾಗ ನಾನು ಎರಡು ಬಾರಿ ಯೋಚಿಸುತ್ತೇನೆ. ನಾನು ನನ್ನ ಪ್ರತಿಕ್ರಿಯೆ ನೀಡಲು ತಡಮಾಡಿದ್ದರೆ ಕ್ಷಮೆ ಇರಲಿ. ಇತ್ತೀಚಿನ ಸಂದರ್ಶನವೊಂದರಲ್ಲಿ ನಾನು ಎಡ ಅಥವಾ ಬಲನಾ ಎಂದು ಪ್ರಶ್ನೆ ಮಾಡಲಾಯಿತು. ಆಗ ನಾನು ತಟಸ್ಥ ಎನ್ನುವ ಉತ್ತರ ಕೊಟ್ಟೆ. ನಾವು ನಮ್ಮ ನಂಬಿಕೆಗಳೊಂದಿಗೆ ಗುರಿತಿಸಿಕೊಳ್ಳುವ ಮೊದಲು ಮನುಷ್ಯರಾಗಬೇಕು. ಎರಡು ಘಟನೆ ನನ್ನನ್ನು ವಿಚಲಿತಗೊಳಿಸಿತ್ತು. ದಿ ಕಾಶ್ಮೀರ್ ಫೈಲ್ಸ್  ಸಿನಿಮಾ ನೋಡಿದ ನಂತರ ನಾನು ಡಿಸ್ಟರ್ಬ್ ಆಗಿದ್ದೆ. ನಿರ್ದೇಶಕರ (ವಿವೇಕ್? ಅಗ್ನಿಹೋತ್ರಿ) ಜೊತೆ ಈ ಬಗ್ಗೆ ಮಾತನಾಡಿದ್ದೆ. ಅದೇ ರೀತಿ ಕೊವಿಡ್ ಸಂದರ್ಭದಲ್ಲಿ ಆದ ಗುಂಪು ಹಲ್ಲೆ ವಿಡಿಯೋ ನೋಡಿ ನಾನು ವಿಚಲಿತಗೊಂಡಿದ್ದೆ. ಹಿಂಸೆ ತಪ್ಪು. ಯಾವುದೇ ಧರ್ಮದ ಹೆಸರಲ್ಲಿ ಹಿಂಸೆ ಮಾಡುವುದು ಪಾಪ. ಗುಂಪು ಹಲ್ಲೆಯನ್ನು ಕೆಲವರು ಸಮರ್ಥಿಸಿಕೊಂಡಿದ್ದರು. ನಿಜಕ್ಕೂ ಅದು ಬೇಸರದ ವಿಚಾರ. ಬೇರೆಯವರ ಜೀವವನ್ನು ತೆಗೆದುಕೊಳ್ಳುವ ಹಕ್ಕು ನಮಗೆ ಇಲ್ಲ. ನಾನು ಎಂಬಿಬಿಎಸ್ ಪದವೀಧರೆಯಾಗಿ ಎಲ್ಲರ ಜೀವವೂ ಮುಖ್ಯ ಎಂದು ನಂಬಿದ್ದೇನೆ. ಭಾರತೀಯರೆಲ್ಲ ಸಹೋದರರಿದ್ದಂತೆ ಎಂದು ಹೇಳುತ್ತಾ ಬೆಳೆದವರು ನಾವು. ನನ್ನ ಮನಸ್ಸಲ್ಲಿ ಅದು ಆಳವಾಗಿ ಕೂತಿದೆ. ನಾನು ಮಾತನಾಡುವಾಗ ತಟಸ್ಥವಾಗಿ ಮಾತನಾಡುತ್ತೇನೆ. ನಾನು ಮಾತನಾಡಿದ್ದನ್ನು ಬೇರೆಯ ರೀತಿ ಅರ್ಥೈಸಿದ್ದು ನಿಜಕ್ಕೂ ಬೇಸರ ತರಿಸುವಂತಹದ್ದು. ಪೂರ್ತಿ ಸಂದರ್ಶನ ನೋಡದೆ ಕೆಲವರು ಮಾತನಾಡಿದ್ದು ಬೇಸರದ ವಿಚಾರ. ನನ್ನ ಪರವಾಗಿ ನಿಂತವರಿಗೆ ಧನ್ಯವಾದ"

ಸಾಯಿ ಪಲ್ಲವಿ ತಮ್ಮ ಹೇಳಿಕೆ ಹಾಗೂ ನಿಲುವಿಗೆ ಬದ್ದರಾಗಿದ್ದಾರೆ. ಯಾವುದೇ ಧರ್ಮದ ಹೆಸರಲ್ಲಿ ಹಿಂಸೆ ಮಾಡುವುದು ಪಾಪ ಎಂದಿದ್ದಾರೆ. ಈ ವಿವಾದ ಇಲ್ಲಿಗೆ ನಿಲ್ಲುತ್ತೋ ಅಥವಾ ಮತ್ತಿನ್ಯಾವ ರೂಪವನ್ನು ಪಡೆದುಕೊಳ್ಳುತ್ತದೆಯೋ ಕಾದು ನೋಡಬೇಕು. ಅದೇನೆ ಇದ್ರು, ನಿತ್ಯವು ಒಂದು ವಿವಾದ, ಗಲಭೆ, ಸಂಘರ್ಷಗಳಿಂದ ಜನರು ಮಾತ್ರ ಹೈರಾಣಾಗಿ ಹೋಗಿದ್ದಾರೆ.

ಬ್ಯೂರೋ ರಿಪೋರ್ಟ್ ಕನ್ನಡ ಮೀಡಿಯಂ ೨೪*೭