ಶಿವಮೊಗ್ಗ : ಖೇಲೋ ಇಂಡಿಯಾ ಯೋಜನೆಗೆ ಕೇಂದ್ರದಿಂದ ಅನುಮೋದನೆ ಸಿಕ್ಕಿದೆ. ರಾಜ್ಯ ಮತ್ತು ಕೇಂದ್ರ ಸರಕಾರದ ಸಹಯೋಗದಲ್ಲಿ ಈ ಯೋಜನೆ ಜಾರಿಗೆ ಬರುತ್ತಿದೆ. ಶಿವಮೊಗ್ಗ ಮತ್ತು ಕೆ.ಆರ್.ಪೇಟೆಯಲ್ಲೂ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದು ಶಿವಮೊಗ್ಗ ನೂತನ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಹೇಳಿದ್ದಾರೆ.
ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತಾಡಿದ ಅವರು, ಸಂಸದರು, ಕೇಂದ್ರ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರನ್ನು ಭೇಟಿ ಮಾಡಿ ಖೇಲೋ ಇಂಡಿಯಾವನ್ನ ಸ್ಯಾಂಕ್ಷನ್ ಮಾಡಿಸಿದ್ದಾರೆ. ಇದಕ್ಕೆ ಭಾರತ ಸರ್ಕಾರ ಅರ್ಧ ಹಣ ನೀಡಲಿದ್ದು, ಕರ್ನಾಟಕ ಸರ್ಕಾರದ ಹಣ ಬಿಡುಗಡೆಗೆ ಅಪ್ರುವಲ್ ಕೂಡ ಆಗಿದೆ ಎಂದರು.
ನಂತರ ಈ ಕುರಿತಾಗಿ ಮಾತನಾಡಿದ ಸಂಸದ ಬಿ.ವೈ.ರಾಘವೇದ್ರ, ಈ ಯೋಜನೆಗೆ ಕೇಂದ್ರದಿಂದ ಇನ್ನೊಂದು ವಾರದಲ್ಲಿ ಆದೇಶ ಕಾಪಿ ಸಿಗಬಹುದು ಎಂದು ಹೇಳಿದರು. ಅಂದ್ಹಾಗೆ ಈ ಯೋಜನೆಗೆ ಸಹ್ಯಾದ್ರಿ ಕಾಲೇಜಿನ ಜಾಗ ಆಯ್ಕೆ ಮಾಡಿಕೊಂಡಿದ್ದಕ್ಕೆ ಅಲ್ಲಿನ ವಿದ್ಯಾರ್ಥಿಗಳು ಹಾಗೂ ಹಳೆಯ ವಿದ್ಯಾರ್ಥಿಗಳು ಸಹ್ಯಾದ್ರಿ ಕ್ಯಾಂಪಸ್ ಉಳಿಸಿ ಎಂಬ ಹೋರಾಟ ಮಾಡಿದ್ದರು. ಆದ್ರೆ ಇದೀಗ ಸಂಸದರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಈ ಯೋಜನೆಯನ್ನ ಎಲ್ಲಿ ಜಾರಿಗೆ ತರಲು ತೀರ್ಮಾನಿಸಿದ್ದಾರೆ ಎಂಬ ಪ್ರಶ್ನೆ ಉದ್ಭವವಾಗಿದೆ.