ಶಿವಮೊಗ್ಗ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ ಪ್ರಕಟವಾಗಿದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ೨೦೧೯ನೇ ಸಾಲಿನ ಪ್ರಶಸ್ತಿ ಪ್ರಕಟಿಸಿದರು.
ಕನ್ನಡಪ್ರಭ ದಿನಪತ್ರಿಕೆ ಸಂಪಾದಕ ರವಿ ಹಗಡೆ ಅವರಿಗೆ ಡಿವಿಜಿ ಪ್ರಶಸ್ತಿ, ಪ್ರಜಾವಾಣಿಯ ಬಿ.ಎಂ.ಹನೀಫ್ ಅವರಿಗೆ ಹೆಚ್.ಎಸ್. ದೊರೆಸ್ವಾಮಿ ಪ್ರಶಸ್ತಿ, ಎಸ್.ಕೆ.ಶೇಷಚಂದ್ರಿಕ ಅವರಿಗೆ ಪಾಟೀಲ್ ಪುಟ್ಟಪ್ಪ ಪ್ರಶಸ್ತಿ, ಅ.ಚ.ಶಿವಣ್ಣ ಅವರಿಗೆ ಎಸ್.ವಿ.ಜಯಶೀಲರಾವ್ ಪ್ರಶಸ್ತಿ, ಕುಂದಪ್ರಭ ಸಂಪಾದಕರಾದ ಯು.ಎಸ್.ಶೆಣೈ ಅವರಿಗೆ ಪಿ.ಆರ್.ರಾಮಯ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮಲೆನಾಡ ಮಂದಾರ ಸಂಪಾದಕ ಕೆ.ಆರ್.ಮಂಜುನಾಥ್ ಅವರಿಗೆ ಗರುಡನಗಿರಿ ನಾಗರಾಜ್ ಪ್ರಶಸ್ತಿ, ಹೊಸಪೇಟೆ ಟೈಮ್ಸ್ ಸಂಪಾದಕಿ ಕೆ.ಎಂ.ರೇಖಾರಿಗೆ ಕಿಡಿ ಶೇಷಪ್ಪ ಪ್ರಶಸ್ತಿ, ಶಿಡ್ಲು ಪತ್ರಿಕೆ ಸಂಪಾದಕ ರೇವಣಸಿದ್ದಯ್ಯ ಮಹಾನುಭವಿ ಮಠ ಅವರಿಗೆ ಪಿ.ರಾಮಯ್ಯ ಪ್ರಶಸ್ತಿ, ಹುಬ್ಬಳ್ಳಿ ಪ್ರಜಾವಾಣಿ ಮುಖ್ಯಸ್ಥೆ ರಶ್ಮಿಗೆ ಯಶೋಧಮ್ಮ ಜಿ. ನಾರಾಯಣ ಪ್ರಶಸ್ತಿ, ಶಿವಮೊಗ್ಗದ ವಿಜಯವಾಣಿ ಪತ್ರಿಕೆಯ ಎನ್.ಡಿ.ಶಾಂತಕುಮಾರ್ ಅವರಿಗೆ ಎಂ.ನಾಗೇAದ್ರ ರಾವ್ ಪ್ರಶಸ್ತಿ, ವಿಜಯ ಕರ್ನಾಟಕ ರಾಮಸ್ವಾಮಿ ಹುಲಕೋಡು ಅವರಿಗೆ ಮಿಂಚು ಶ್ರೀನಿವಾಸ್ ಪ್ರಶಸ್ತಿ, ಬೆಂಗಳೂರಿನ ಪಿ.ಸುನೀಲ್ ಕುಮಾರ್‌ಗೆ ಎಸ್.ಹೆಚ್.ರಂಗಸ್ವಾಮಿ ಪ್ರಶಸ್ತಿ, ರಾಯಚೂರಿನ ಪ್ರಹ್ಲಾದ್ ಗುಡಿ ಅವರಿಗೆ ಸಂಘದ ವಿಶೇಷ ಪ್ರಶಸ್ತಿ, ಕೋಲಾರದ ಮುನಿವೆಂಕಟೇಗೌಡ ಅವರಿಗೆ ಸಂಘದ ವಿಶೇಷ ಪ್ರಶಸ್ತಿ, ತೀರ್ಥಹಳ್ಳಿಯ ಎಂ.ಕೆ. ರಾಘವೇಂದ್ರ ಮೇಗರವಳ್ಳಿ ಅವರಿಗೆ ಅವರಿಗೆ ಸಂಘದ ವಿಶೇಷ ಪ್ರಶಸ್ತಿ, ಬೆಂಗಳೂರಿನ ಪ್ರಕಾಶ್ ರಾಮಜೋಗಿಹಳ್ಳಿ ಅವರಿಗೆ ಸಂಘದ ವಿಶೇಷ ಪ್ರಶಸ್ತಿ ನೀಡಲಾಗುತ್ತಿದೆ.
ಬರುವ ಭಾನುವಾರ ಸಂಜೆ ಶಿವಮೊಗ್ಗ ನಗರದ ಕಂಟ್ರಿ ಕ್ಲಬ್‌ನ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿಯ ಮುಖಂಡ ಎನ್.ರವಿಕುಮಾರ್ ತಿಳಿಸಿದ್ರು. ಸುದ್ದಿಗೋಷ್ಠಿಯಲ್ಲಿ ಶಿವಕುಮಾರ್, ರವಿ ಟೆಲೆಕ್ಸ್, ವೈದ್ಯ, ಅರುಣ್ ಉಪಸ್ಥಿತರಿದ್ದರು.