ಕರ್ನಾಟಕ ಸ್ಟಾಂಪ್ ತಿದ್ದುಪಡಿ ವಿಧೇಯಕ ಮಂಡನೆ 

ಬೆಂಗಳೂರು : ವಿಧಾನ ಸಭಾ ಅಧಿವೇಶನದಲ್ಲಿ ಗದ್ದಲದ ನಡುವೆಯೇ ಕರ್ನಾಟಕ ಸ್ಟಾಂಪ್ ತಿದ್ದುಪಡಿ ವಿಧೇಯಕ ೨೦೨೨ ಮಂಡನೆಯಾಗಿದೆ. ಕಂದಾಯ ಸಚಿವ ಆರ್. ಅಶೋಕ್ ವಿಧೇಯಕವನ್ನ ಮಂಡಿಸಿದ್ದಾರೆ.

ಈ ತಿದ್ದುಪಡಿ ವಿಧೇಯಕ ಪ್ರಕಾರ ನೀವು ಯಾವುದೇ ಗೃಹ ನಿರ್ಮಾಣ ಸಹಕಾರ ಸಂಘದಿಂದ ಹಂಚಿಕೆಯಾದ ನಿವೇಷನದ ಭೋಗ್ಯ ಮತ್ತು ಮಾರಾಟ ಕರಾರು ಮಾಡಿಕೊಂಡಿದ್ದು, ಅಂತಹ ಕರಾರಿನ ಮುಂದುವರಿಕೆಗಾಗಿ ಹಸ್ತಾಂತರ ಪತ್ರ ಮಾಡಿಕೊಂಡಿದ್ದರೆ ಅಂತಹ ಹಸ್ತಾಂತರ ಪತ್ರದ ಮೇಲೆ ಪಾವತಿಸಬೇಕಾದ ಸುಂಕವು ಭೋಗ್ಯ ಮತ್ತು ಮಾರಾಟ ಕರಾರನ್ನು ಬರೆದುಕೊಟ್ಟ ದಿನಾಂಕದಂದು ಇದ್ದ ಅಂತಹ ನಿವೇಶನದ ಮಾರುಕಟ್ಟೆ ಮೌಲ್ಯದ ಅನ್ವಯದಂತೆ ನಿಗದಿಯಾಗುತ್ತದೆ. ಈ ರೀತಿಯಾಗಿ ಕಾಯ್ದೆ ತಿದ್ದುಪಡಿ ಮಾಡಿರುವುದರಿಂದ ಸರ್ಕಾರಕ್ಕೆ  ಆರು ಕೋಟಿ ವಾರ್ಷಿಕ ಹಣಕಾಸು ಕೊರತೆ ಉಂಟಾಗಬಹುದು ಎಂದು ಅಂದಾಜಿಸಲಾಗಿದೆ.