ಶಿವಮೊಗ್ಗ : ಕುವೆಂಪು ರಂಗಮಂದಿರದಲ್ಲಿ ಕೈವಾರ ತಾತಯ್ಯ ಎಂದೇ ಪ್ರಸಿದ್ಧರಾಗಿರುವ ಯೋಗಿನಾರೇಯಣ ಯತೀಂದ್ರರ ಜಯಂತಿ ಆಚರಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ನಡೆದ ಕಾರ್ಯಕ್ರಮಕ್ಕೆ ಕುವೆಂಪು ವಿವಿ ಕುಲಸಚಿವೆ ಅನುರಾಧ ದೀಪಬೆಳಗವುದರ ಮೂಲಕ ಚಾಲನೆ ನೀಡದರು
. ಈ ವೇಳೆ ಮಾತನಾಡಿದ ಅವರು, ಎರಡು ವರ್ಷದ ಹಿಂದೆ ಈ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಿದ್ದೆವು. ಕೋವಿಡ್ ಬಂದ ನಂತರ ಜಯಂತಿ ಆಚರಣೆಗೆ ಅನುದಾನ ಕಡಿಮೆಯಾದ ಹಿನ್ನೆಲೆ ನಾವು ಸರಳವಾಗಿ ಆಚರಿಸುತ್ತಿದ್ದೇವೆ. ಕೋವಿಡ್ ಕಡಿಮೆಯಾಗುತ್ತಿದೆ. ಆದ್ದರಿಂದ ಇಂತಹ ಜಯಂತಿಗಳನ್ನು ವಿಜೃಂಭಣೆಯಿಂದ ಆಚರಿಸಬೇಕು. ಸಾಕಷ್ಟು ಜನರೂ ಕೂಡ ಭಾಗಿಯಾಗಿ ಇಂಥಹ ಮಹಾನುಭಾವರ ತತ್ವಗಳನ್ನು ತಿಳಿಯಬೇಕು ಎಂದರು.