ಹೈಲೆಟ್ಸ್ :
ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಕಾರ್ಯಕ್ರಮ
ಇಲ್ಲಿನ ಹಿಂದೂಗಳು, ಮುಸ್ಲಿಂರಿಂದ ಯಾವುದೇ ತೊಂದರೆಯಿಲ್ಲ
ಯಾವುದೇ ಕಾರಣಕ್ಕೂ ಅಹಿತರ ಘಟನೆ ನಡೆಯೋದಿಲ್ಲ
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ
ಶಿವಮೊಗ್ಗ : ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ವೇಳೆ ಹೊರಗಡೆಯಿಂದ ಬಂದು ಗಲಾಟೆ ಮಾಡಲು ಪ್ರಯತ್ನಿಸುವ ಮುಸ್ಲಿಂರಿಗೆ ಶಿವಮೊಗ್ಗ ನಗರದ ಹಿರಿಯ ಮುಸ್ಲಿಂರು ಬುದ್ಧಿ ಹೇಳ್ತಾರೆ ಎಂಬ ವಿಶ್ವಾಸವಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ರು. ಶುಕ್ರವಾರ ನಡೆಯಲಿರುವ ಗಣಪತಿ ರಾಜಬೀದಿ ಉತ್ಸವದ ಕುರಿತು ಮಾತನಾಡಿದ ಕೆಎಸ್‌ಈ, ಇಲ್ಲಿನ ಹಿಂದೂಗಳು, ಮುಸ್ಲಿಂರು ಗಣಪತಿ ವಿಸರ್ಜನೆಗೆ ಯಾವುದೇ ತೊಂದರೆ ಮಾಡಲ್ಲ. ಯಾವುದೇ ಕಾರಣಕ್ಕೂ ಒಂದೇ ಒಂದು ಅಹಿತಕರ ಘಟನೆ ನಡೆಯೋದಿಲ್ಲ. ಶಾಂತಿ ಪ್ರಿಯರಿರುವ ಶಿವಮೊಗ್ಗ ನಗರದಲ್ಲಿ ಎಲ್ಲಾ ಗಣಪತಿಗಳ ವಿಸರ್ಜನೆ ಶಾಂತಿಯಿಂದ ಆಗುತ್ತೆ. ಜಿಲ್ಲಾಧಿಕಾರಿ ಹಾಗೂ ಎಸ್‌ಪಿ ಕೂಡ ಸಾಕಷ್ಟು ಕ್ರಮ ಕೈಗೊಂಡಿದ್ದಾರೆ. ಮೆರವಣಿಗೆಯಲ್ಲಿ ಎಲ್ಲರೂ ಶಾಂತಿಯಿಂದ ಭಾಗಿಯಾಗಿ ಎಂದು ಶಾಸಕನಾಗಿ ನಾನು ಮನವಿ ಮಾಡಿಕೊಳ್ಳುತ್ತೇನೆ ಎಂದ್ರು.
ಹೈಲೆಟ್ಸ್ :
ದೇಶಕ್ಕಾಗಿ ಸಾವಿರಾರು ಜನ ತ್ಯಾಗ ಮಾಡಿದ್ರು
ತ್ಯಾಗಕ್ಕೆ ಬೆಲೆ ಇಲ್ಲದೆ ಕಾಂಗ್ರೆಸ್ ದೇಶವನ್ನು ತುಂಡು ಮಾಡಿತು
ಅವರ ತ್ಯಾಗಕ್ಕೆ ರಾಹುಲ್ ಗಾಂಧಿ ಉತ್ತರ ನೀಡಲಿ
ಭಾರತ್ ಜೋಡೋ ಯಾತ್ರೆಗೆ ಕೆ.ಎಸ್.ಈಶ್ವರಪ್ಪ ಕಿಡಿ
ಶಿವಮೊಗ್ಗ : ದೇಶವನ್ನು ತುಂಡು ಮಾಡಿದವರು ಇವರೇ... ಸ್ವಾತಂತ್ರ್ಯಕ್ಕಾಗಿ ಬಲಿದಾನವನ್ನು ಮಾಡಿದಂತಹ ಸಾವಿರಾರು ಜನರ ಜೀವಕ್ಕೇ ಬೆಲೆಯೇ ಇಲ್ಲದಂತೆ ಮಾಡಿ ಅಖಂಡ ಭಾರತವನ್ನು ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶವೆಂಬ ಮೂರು ತುಂಡಾಗಿ ಮಾಡಿದವರು ಇವರೇ.. ಎಂದು ಕಾಂಗ್ರೆಸ್ ವಿರುದ್ಧ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು. ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಕೆಎಸ್‌ಈ, ಕಾಂಗ್ರೆಸ್ ಪಾದಯಾತ್ರೆ ಮೂಲಕ ಅಖಂಡ ಭಾರತ ನಿರ್ಮಾಣವಾಗಲಿ. ಪಾಕಿಸ್ತಾನ ಮತ್ತು ಬಾಂಗ್ಲದೇಶವನ್ನು ವಾಪಸ್ಸು ತರುವ ಉದ್ದೇಶದಿಂದ ನಾವು ಹೊರಟಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಲಿ. ಅಧಿಕಾರದ ಅಸೆಯಿಂದ ಭಾರತವನ್ನು ಮೂರು ತುಂಡಾಗಿ ಮಾಡಿದ್ದರು. ಈ ದೇಶಕ್ಕಾಗಿ ತ್ಯಾಗ ಮಾಡಿದ ಸಾವಿರಾರು ಜನರ ಪ್ರಾಣಕ್ಕೆ ರಾಹುಲ್ ಗಾಂಧಿ ಉತ್ತರ ನೀಡಲಿ ಎಂದು ಆಗ್ರಹಿಸಿದ್ರು.