24*7 ಕುಡಿಯುವ ನೀರಿನ ಯೋಜನೆ ಕುರಿತು ಕೆ.ಎಸ್.ಈಶ್ವರಪ್ಪ ಸಭೆ 

ಹೈಲೆಟ್ಸ್ : 

24*7  ಕುಡಿಯುವ ನೀರಿನ ಯೋಜನೆ
ತುಕ್ಕು ಹಿಡಿದಿರುವ ಪೈಪ್ ಬಳಕೆ 
ಅವೈಜ್ಞಾನಿಕ, ಕಳಪೆ ಕಾಮಗಾರಿ ಆರೋಪ 
ಯೋಜನೆ ಕುರಿತು ಕೆ.ಎಸ್.ಈಶ್ವರಪ್ಪ ಸಭೆ 

ಶಿವಮೊಗ್ಗ :  ನಗರದಲ್ಲಿ ನಡೆಯುತ್ತಿರುವ ೨೪*೭ ಕುಡಿಯುವ ನೀರಿನ ಯೋಜನೆಯಲ್ಲಿ ಸಾಕಷ್ಟು ಲೋಪ ದೋಷಗಳಿವೆ. ಈ ಯೋಜನೆಯಡಿ ಅಳವಡಿಸಿರುವ ಮೀಟರ್ ಅವೈಜ್ಞಾನಿಕವಾಗಿದೆ. ಕಾಮಗಾರಿಯಲ್ಲಿ ತುಕ್ಕು ಹಿಡಿದ ಹಾಗೇನೆ ಹಿಡಿಯುವ ಹಂತದಲ್ಲಿರುವ ಜಿ.ಐ ಪೈಪ್‌ಗಳ ಬಳಕೆ ಮಾಡಲಾಗುತ್ತಿದೆ. ಯೋಜನೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು.

ಶಿವಮೊಗ್ಗ ನಾಗರೀಕ ಹಿತರಕ್ಷಣಾ ವೇದಿಕೆಯಿಂದ ಈ ವಿಚಾರವಾಗಿ ಬೆಳಕು ಚೆಲ್ಲುವ ಪ್ರಯತ್ನ ನಡೆಯುತ್ತಿದೆ. ಈ ಹಿನ್ನೆಲೆ ಶಾಸಕ ಕೆ.ಎಸ್.ಈಶ್ವರಪ್ಪ ಈ ವಿಚಾರವಾಗಿ ತಮ್ಮ ಕಚೇರಿಯಲ್ಲಿ ಅಧಿಕಾರಿಗಳು ಹಾಗು ಸಂಘ ಸಂಸ್ಥೆಗಳ ಜೊತೆ ಸಭೆ ನಡೆಸಿ ಚರ್ಚಿಸಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕಾಮಗಾರಿ ೬೦ ಪರ್ಸೆಂಟ್ ಮುಗಿದಿದೆ. ಮೂರು ನಾಲ್ಕು ಪ್ರಮುಖ ಅಂಶಗಳನ್ನು ಸಭೆಯಲ್ಲಿ ಪ್ರಸ್ತಾಪ ಮಾಡಲಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳು ನೂನ್ಯತೆಗಳನ್ನು ಸರಿಪಡಿಸಿಕೊಳ್ಳುವುದಾಗಿ ಹೇಳಿದ್ದಾರೆ. ನಗರದ ಎಲ್ಲಾ ವಾರ್ಡ್‌ಗಳಲ್ಲಿರಿವ ಸಮಸ್ಯೆಗಳನ್ನು ಸರಿಪಡಿಸುವುದಾಗಿ ಸಂಸ್ಥೆಗಳು ಹಾಗೂ ಇಲಾಖೆಯವರು ಹೇಳಿದ್ದಾರೆ ಎಂದರು.