ಸಿದ್ದರಾಮಯ್ಯಗೆ ಅಭಿನಂದನೆ ಸಲ್ಲಿಸಿದ ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ : ಸಿದ್ದರಾಮಯ್ಯ ಹುಚ್ಚ, ಅಯೋಗ್ಯ, ನಿಮಾನ್ಸ್‌ನಲ್ಲೂ ಟ್ರೀಟ್‌ಮೆಂಟ್ ಸಿಗೋದಿಲ್ಲ ಅಂತ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಕೆಲ ದಿನಗಳ ಹಿಂದೆ ಹೇಳಿದ್ರು. ಇದೀಗ ಸಿದ್ದರಾಮಯ್ಯರನ್ನು ಸ್ವಲ್ಪ ಹೋಗಳಿ ಮತ್ತೆ ಕಾಲೆಳೆದಿದ್ದಾರೆ. ಹೌದು, ರಾಜ್ಯಸಭೆಯಲ್ಲಿ ಬಿಜೆಪಿ ಮೂರನೇ ಸ್ಥಾನವನ್ನು ಗೆಲ್ಲುವಲ್ಲಿ ಸಿದ್ದರಾಮಯ್ಯ ಅವರ ಪಾತ್ರವೂ ಇದೆ. ಹೀಗಾಗಿ ಅವರಿಗೂ ಕೂಡ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸಿದ್ದರಾಮಯ್ಯ ಕಾಲೆಳಿದಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಕೆಎಸ್‌ಈ, ಸಿದ್ದರಾಮಯ್ಯ ನಾವು ಮುಸಲ್ಮಾನರ ಪರ ಅಂತಾರೆ, ಆದ್ರೆ ಮನ್ಸೂರ್ ಅಲಿಖಾನ್ ಅವರನ್ನು ಸೋಲಿಸಿ ಮುಸಲ್ಮಾನರಿಗೆ ದ್ರೋಹ ಬಗೆದಿದ್ದಾರೆ. ಬಿಜೆಪಿ ಮೂರನೇ ಸ್ಥಾನ ಗೆಲ್ಲಲು, ಮನ್ಸೂರ್ ಅಲಿಖಾನ್ ಸೋಲಲು, ಜೆಡಿಎಸ್ ಅಭ್ಯರ್ಥಿ ಸೋಲಲು ಸಿದ್ದರಾಮಯ್ಯ, ಡಿಕೆಶಿ ಅವರೇ ಕಾರಣ.

ಮುಸಲ್ಮಾನರು ಇನ್ನಾದರೂ ಪಾಠ ಕಲಿಯಬೇಕಿದೆ. ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರ ಬಳಸಿಕೊಂಡು ಸಿದ್ದರಾಮಯ್ಯ ಮುಖ್ಯಮಂತ್ರಿ ಆದ್ರೂ. ಆನಂತರ ಅವರನ್ನು ತುಳಿಯುವ ಕೆಲಸ ಮಾಡಿದ್ರು ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ರು. ಹಾಗೇನೆ ಬೇರೆ ಬೇರೆ ಪಕ್ಷದ ವ್ಯಕ್ತಿಗಳು ಬಿಜೆಪಿ ಪಕ್ಷದ ತತ್ವ, ಸಿದ್ದಾಂತ ಒಪ್ಪಿ ಬರುವುದಾದರೆ ನಮ್ಮ ಪಕ್ಷಕ್ಕೆ ಬನ್ನಿ ಎಂದು ಆಫರ್ ಕೂಡ ನೀಡಿದ್ದಾರೆ.