ಕೇಶವ ಮೂರ್ತಿಯವರನ್ನು ಸನ್ಮಾನಿಸಿದ ಕೆ.ಈ.ಕಾಂತೇಶ್ 

ಹೊಸಳ್ಳಿ : ಶಿವಮೊಗ್ಗದ ಗಮಕ ಕಲಾವಿದ ಹೊಸಳ್ಳಿ ಹೆಚ್.ಆರ್.ಕೇಶವ ಮೂರ್ತಿಯವರನ್ನು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ.ಈ.ಕಾಂತೇಶ್ ಸನ್ಮಾನಿಸಿ ಗೌರವಿಸಿದ್ದಾರೆ.

ಹೊಸಳ್ಳಿಯ ಅವರ ಮನೆಯಲ್ಲಿ ಶಾಲು ಹೊದಿಸಿ ಸನ್ಮಾನಿಸಿ, ಕಾಲಿಗೆ ಬಿದ್ದು ಆರ್ಶೀವಾದ ಪಡೆದುಕೊಂಡಿದ್ದಾರೆ. ಈ ವೇಳೆ ವಿನಯ್ ಶಿವಮೊಗ್ಗ, ಸಹನಾ ಚೇತನ್, ಪಾಲಿಕೆ ಸದಸ್ಯ ಪ್ರಭು ಹಾಗೂ ಮತ್ತಿತರು ಉಪಸ್ಥಿತರಿದ್ದರು. ಇತ್ತೀಚೆಗೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಹೆಚ್.ಆರ್.ಕೇಶವ ಮೂರ್ತಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದರು.