ಹೈಲೆಟ್ಸ್:
ಈಶ್ವರಪ್ಪನವರೇ ಸಿದ್ದರಾಮಯ್ಯನವರ ವಿರುದ್ಧ ನಿಲ್ಲಬೇಕು
ಯಡಿಯೂರಪ್ಪನವರ ಸಹಕಾರವಿಲ್ಲದೇ ಗೆಲ್ಲಬೇಕು
ಕೆಪಿಸಿಸಿ ಸದಸ್ಯ ವೈ.ಹೆಚ್ ನಾಗರಾಜ್ ಸವಾಲ್
ಶಿವಮೊಗ್ಗ:
ಮಾಜಿ ಸಚಿವ ಈಶ್ವರಪ್ಪನವರೇ ಸಿದ್ದರಾಮಯ್ಯನವರ ವಿರುದ್ಧ ನಿಲ್ಲಬೇಕು. ಅಥವಾ ಯಡಿಯೂರಪ್ಪನವರ ಸಹಕಾರವಿಲ್ಲದೇ ಶಿವಮೊಗ್ಗದಲ್ಲಿ ಗೆಲ್ಲಬೇಕು ಎಂದು ಕೆಪಿಸಿಸಿ ಸದಸ್ಯ ವೈ.ಹೆಚ್ ನಾಗರಾಜ್ ಸವಾಲು ಹಾಕಿದ್ದಾರೆ. ಸಿದ್ದರಾಮಯ್ಯನವರಿಗೆ ಯಾವುದೇ ಕ್ಷೇತ್ರವಿಲ್ಲ, ಇನ್ನೂ ಕ್ಷೇತ್ರವನ್ನು ಹುಡುಕಾಡುತ್ತಿದ್ದಾರೆ ಎಂದು ಶಾಸಕ ಈಶ್ವರಪ್ಪನವರ ಮಾತಿಗೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲಿ ನಿಲ್ಲಬೇಕು ಎನ್ನುವುದು ಸಿದ್ದರಾಮಯ್ಯನವರ ವೈಯಕ್ತಿಕ ವಿಚಾರ. ಸಿದ್ದರಾಮಯ್ಯನವರ ಬಗ್ಗೆ ಈಶ್ವರಪ್ಪನವರಿಗೆ ಯಾಕೆ ಚಿಂತೆ. ಬೇಕಾಬಿಟ್ಟಿ ಮಾತನಾಡುವುದರಲ್ಲಿ ನಂಬರ್ ಒನ್ ಆಗಿದ್ದಾರೆ. ಸಿದ್ದರಾಮಯ್ಯನವರ ವರ್ಚಸ್ಸು ೨೨೪ ಕ್ಷೇತ್ರಗಳಲ್ಲೂ ಇದೆ. ಸಿದ್ದರಾಮಯ್ಯನವರನ್ನು ಟೀಕೆ ಮಾಡಿದರೆ ಟಿಕೆಟ್ ಸಿಗಬಹುದು ಎಂಬ ಭ್ರಮೆಯಲ್ಲಿ ಈಶ್ವರಪ್ಪನವರಿದ್ದಾರೆ. ಹಾಗಾಗಿ ಈಶ್ವರಪ್ಪನವರೇ ಸಿದ್ದರಾಮಯ್ಯನವರ ವಿರುದ್ಧ ನಿಲ್ಲಬೇಕು. ಅಥವಾ ಯಡಿಯೂರಪ್ಪನವರ ಸಹಕಾರವಿಲ್ಲದೇ ಶಿವಮೊಗ್ಗದಲ್ಲಿ ಗೆಲ್ಲಬೇಕು ಎಂದು ಸವಾಲು ಹಾಕಿದರು.