ಶಿವಮೊಗ್ಗ : ಪುರಲೆಯಲ್ಲಿ ಸತ್ಯಶೋಧಕ ಸಮಾಜದ ಸ್ಥಾಪಕ, ಸಮಾಜ ಸುಧಾರಕ ಜ್ಯೋತಿಬಾ ಫುಲೆ ಜಯಂತಿ ಕಾರ್ಯಕ್ರಮ ನಡೆಯಿತು. ಶಿವಮೊಗ್ಗ ಬಿಜೆಪಿ ಎಸ್.ಸಿ, ಎಸ್.ಟಿ ಮೋರ್ಚಾ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ.ಈ.ಕಾಂತೇಶ್, ಹಿಂದುಳಿದ ಸಮಾಜದ ವ್ಯಕ್ತಿಗಳೂ ಕೂಡ ಎಲ್ಲರಂತೆ ಸಮಾನವಾಗಿ ಬಾಳಬೇಕು. ಅವರೂ ಕೂಡ ಎಲ್ಲರಂತೆ ಜೀವನ ನಡೆಸಲೂ ಅರ್ಹರು ಎಂದು ಮೊದಲು ತೀರ್ಮಾನಿಸಿದ ವ್ಯಕ್ತಿ ಅಂದರೆ ಅದು ಜ್ಯೋತಿಬಾ ಪುಲೆ ಎಂದರು.