ಹೈಲೆಟ್ಸ್ :
ಶಿವಮೊಗ್ಗ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ
ನ್ಯಾಯಾಧೀಶರಾಗಿ ಮಲ್ಲಿಕಾರ್ಜುನ ಗೌಡ ನೇಮಕ
ಬೆಳಗಾವಿಗೆ ವರ್ಗಾವಣೆಯಾದ ಮುಸ್ತಾಫಾ ಹುಸೇನ್ ಅಜೀಜ್
ಬೆಂಗಳೂರು : ಶಿವಮೊಗ್ಗ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾಗಿ ಮಲ್ಲಿಕಾರ್ಜುನ ಗೌಡ ಅವರನ್ನು ನೇಮಿಸಲಾಗಿದೆ. ಹಾಗೇನೆ ಇಲ್ಲಿ ಕಾರ್ಯ ನಿರ್ವಹಿಸ್ತಾಯಿದ್ದ ನ್ಯಾಯಾಧೀಶರಾದ ಮುಸ್ತಾಫಾ ಹುಸೇನ್ ಅಜೀಜ್ ಅವರನ್ನು ಬೆಳಗಾವಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಅಂದ್ಹಾಗೆ ಶಿವಮೊಗ್ಗಕ್ಕೆ ವರ್ಗಾವಣೆಯಾಗಿರುವ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಕಳೆದ ಗಣರಾಜೋತ್ಸವದಂದು ಅಂಬೇಡ್ಕರ್ ಭಾವಿಚಿತ್ರವಿಟ್ಟಲ್ಲಿ ಧ್ವಜಾರೋಹಣ ಮಾಡೋದಿಲ್ಲ ಎಂದಿದ್ದರು. ಇದು ಕರ್ನಾಟಕದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗುವಂತೆ ಮಾಡಿತ್ತು.