ಶಿವಮೊಗ್ಗ : ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಹಾಗೂ ಕೌಶಲಾಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಡಿವಿಎಸ್ ಕಾಲೇಜಿನಲ್ಲಿ ಉದ್ಯೋಗ ಮೇಳ ನಡೆಯಿತು.
ಮೇಳಕ್ಕೆ ೨೫ಕ್ಕು ಹೆಚ್ಚು ಸ್ಥಳೀಯ ಕಂಪನಿಗಳು ಭಾಗವಹಿಸಿದ್ದವು. ೧೨೦೦ಕ್ಕೂ ಹೆಚ್ಚು ಉದ್ಯೋಗ ಆಕಾಂಕ್ಷಿಗಳ ಉದ್ಯೋಗ ಮೇಳಕ್ಕೆ ಹೆಸರು ನೋಂದಾಯಿಸಿಕೊಂಡಿದ್ದರು. ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ಹೆಸರು ನೋಂದಾಯಿಸಲು ಅವಕಾಶ ಕಲ್ಪಿಸಲಾಗಿತ್ತು.
ಉದ್ಯೋಗ ಮೇಳದ ದಿವ್ಯ ಸಾನಿಧ್ಯವನ್ನು ಗೌರಿಗದ್ದೆಯ ಅವದೂತ ಶ್ರೀ ವಿನಯ್ ಗುರೂಜಿ ವಹಿಸಿಕೊಂಡಿದ್ದರು. ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಮೇಳವನ್ನು ಉದ್ಘಾಟಿಸಿದರು.