ಶಿವಮೊಗ್ಗ : ಒಂದು ವರ್ಷದಿಂದ ಅಪ್ಪ ಅಮ್ಮನ ಬಿಟ್ಟು ದೂರದ ಉಕ್ರೇನ್‌ನಲ್ಲಿದ್ದೆ. ತುಂಬಾ ದಿನಗಳಿಂದ ಭಾರತಕ್ಕೆ ಬರಬೇಕು ಬರಬೇಕು ಅಂದುಕೊಳ್ಳುತ್ತಿದ್ದ ವಿದ್ಯಾರ್ಥಿನಿಯು ರಷ್ಯಾ-ಉಕ್ರೇನ್ ಸಂರ್ಘದಿಂದ ಕೂದಲೆಳೆಯ ಅಂತರದಲ್ಲಿ ಬಚಾವಾಗಿ ಬಂದಿದ್ದಾಳೆ.
ಹೌದು, ರಷ್ಯಾ-ಉಕ್ರೇನ್ ಯುದ್ಧ ಆರಂಭವಾಗಿದೆ. ಈ ನಡುವೆ ಉಕ್ರೇನ್‌ನಲ್ಲಿ ಸಿಲುಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ವಾಪಸ್ ಕರೆತರುವ ಪ್ರಯತ್ನ ಕೂಡ ನಡೆಯುತ್ತಿದೆ. ಉಕ್ರೇನ್‌ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ಶಿವಮೊಗ್ಗದ ಜೈಶೀಲ ಎಂಬ ವಿದ್ಯಾರ್ಥಿನಿ ಸುರಕ್ಷಿತವಾಗಿ ಭಾರತ ತಲುಪಿ, ನಂತರ ತನ್ನ ಮನೆಯನ್ನೂ ಕೂಡ ಸುರಕ್ಷತವಾಗಿ ತಲುಪಿದ್ದಾಳೆ. ಯುದ್ಧ ಆರಂಭಕ್ಕೂ ಒಂದು ದಿನ ಮುಂಚೆ ಉಕ್ರೇನ್‌ನಿಂದ ಹೊರಟ ಇವರು ಕೆಲ ಸಮಯ ಪೋಷಕರಿಂದ ಸಂಪರ್ಕ ಕಳೆದುಕೊಂಡಿದ್ದರು. ಆಗ ಪೋಷಕರು ಸಾಕಷ್ಟು ಆತಂಕಕ್ಕೆ ಒಳಗಾಗಿದ್ದರು. ಇದೀಗ ಜೈಶೀಲ ಸುರಕ್ಷಿತವಾಗಿ ವಾಪಸ್ಸಾಗಿದ್ದು ಮನೆಯವರು ನಿಟ್ಟುಸಿರು ಬಿಟ್ಟಿದ್ದಾರೆ.