ಶಿವಮೊಗ್ಗ : ಜಿಲ್ಲೆಯಲ್ಲಿ ಜುಲೈ ತಿಂಗಳಿಂದ ಆರಂಭವಾಗಿರುವ ಮಳೆಗೆ ಜನ್ರು ಹೈರಾಣಾಗಿ ಹೋಗಿದ್ದಾರೆ. ಆದ್ರೆ ಈಗ ಸುರಿಯುತ್ತಿರುವ ಮಳೆ ವಾಡಿಕಗಿಂತ ಕಡಿಮೆಯೇ ಆಗಿದೆ.
ಹೌದು, ಜಿಲ್ಲೆಯಲ್ಲಿ ಈ ಸಮಯದಲ್ಲಿ ಅಂದ್ರೆ ಜುಲೈ ೧ರಿಂದ ೧೩ರವರೆಗೆ ಸರಾಸರಿ ೨೦೪.೭೦ ಮಿಲಿ ಮೀಟರ್‌ನಷ್ಟು ಮಳೆಯಾಗುವುದು ವಾಡಿಕೆ ಆದ್ರೆ ಈ ಬಾರಿ ೧೯೯.೩೦ ಮಿಲಿ ಮೀಟರ್‌ನಷ್ಟು ಮಾತ್ರ ಮಳೆಯಾಗಿದೆ. ಇದು ವಾಡಿಕೆಗಿಂತ ಕಡೆಮೆಯೇ ಆದ್ರೂ ಕಳೆದ ವರ್ಷದ ಮಳೆಗೆ ಹೋಲಿಸಿದ್ರೆ ಮಳೆ ಅಬ್ಬರ ಜೋರಾಗಿಯೇ ಇದೆ. ಯಾಕೆಂದ್ರ ಕಳೆದ ವರ್ಷ ಈ ಸಮಯದಲ್ಲಿ ಕೇವಲ ೪೭.೯೦ ಮಿಲಿ ಮೀಟರ್‌ನಷ್ಟು ಮಾತ್ರ ಮಳೆಯಾಗಿತ್ತು.
ಇನ್ನು ತಾಲೂಕುವಾರು ವಿಚಾರವಾಗಿ ನೋಡೋದಾದ್ರೆ ಹೊಸನಗರದಲ್ಲಿ ಈ ಅಧಿಯಲ್ಲಿ ಅತಿ ಹೆಚ್ಚು ೬೨೪.೩೦ ಮಿಲಿ ಮೀಟರ್ ಮಳೆಯಾಗಿದೆ. ಭದ್ರಾವತಿಯಲ್ಲಿ ಅತಿ ಕಡಿಮೆ ೧೩೭.೯೦ ಮಿಲಿ ಮೀಟರ್ ಮಳೆ ದಾಖಲಾಗಿದೆ.