ಎಲೆಕ್ಟ್ರಿಕ್ ಬೈಕ್ ಓಡಿಸಿ ಮಿಂಚಿದ ಮಾಜಿ ಸಚಿವ ಈಶ್ವರಪ್ಪ 

ಶಿವಮೊಗ್ಗ : ಈ ದಿನ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಬೈಕ್ ಮತ್ತು ಸ್ಕೂಟರ್‌ನಲ್ಲಿ ಸಖತ್ ಮಿಂಚಿದ್ರು. ಎಲೆಕ್ಟ್ರಿಕ್ ಬೈಕ್ ಹತ್ತಿಕೊಂಡು ಒಂದು ರೌಂಡ್ ಹೊಡೆದ್ರು. ಶಿವಮೊಗ್ಗ ಬಿಜೆಪಿ ಯುವಮೋರ್ಚಾ ವತಿಯಿಂದ ವಿಶ್ವ ಪರಿಸರ ವಿಕಾಸ ರ್‍ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು.

ನರೇಂದ್ರ ಮೋದಿ ಸರ್ಕಾರ 8 ವರ್ಷ ಆಡಳಿತ ಪೂರೈಸಿದ ಹಿನ್ನೆಲೆ ಪರಿಸರ ದಿನಾಚರಣೆ ಅಂಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಇಂಧನ ರಹಿತ, ಬ್ಯಾಟರಿ ಚಾಲಿತ ಬೈಕ್ ಓಡಿಸುವ ಮೂಲಕ ಈ ರ್‍ಯಾಲಿಗೆ ಚಾಲನೆ ನೀಡಿದರು.

ಈ ವೇಳೆ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಶಿವಮೊಗ್ಗ ನಗರ ಬಿಜೆಪಿ ಅಧ್ಯಕ್ಷ ಜಗದೀಶ್, ಮಹಾನಗರ ಪಾಲಿಕೆ ಮೇಯರ್ ಸುನೀತ ಅಣ್ಣಪ್ಪ, ಮತ್ತಿತತರ ಪ್ರಮುಖರು ಉಪಸ್ಥಿತರಿದ್ದರು.