ಲೀನಾ ಮಣಿಮೇಕಲೈ ಬಂಧನಕ್ಕೆ ಹೆಚ್ಚಿದ ಆಗ್ರಹ

ಶಿವಮೊಗ್ಗ : ಸಾಕ್ಷ್ಯ ಚಿತ್ರ ಒಂದರಲ್ಲಿ ಕಾಳಿಕಾಂಬೆಯನ್ನು ಅವಹೇಳನಕಾರಿ ಚಿತ್ರಿಸಿರುವ ಲೀನಾ ಮಣಿಮೇಕಲೈ ಬಂಧನಕ್ಕೆ ಆಗ್ರಹಗಳು ಹೆಚ್ಚಾಗ್ತಾಯಿವೆ. ಶಿವಮೊಗ್ಗದಲ್ಲಿ ಈ ವಿಚಾರವಾಗಿ ಜಿಲ್ಲಾ ವಿಶ್ವಕರ್ಮ ಮಹಾಸಭಾ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದೆ. ನಮ್ಮ ಆರಾಧ್ಯ ದೇವತೆ ಕಾಳಿಕಾಂಬೆಯನ್ನು ಅವಹೇಳನವಾಗಿ ಚಿತ್ರಿಸಿ ಕಾಳಿಯ ಒಂದು ಕೈಯಲ್ಲಿ ಸಿಗರೇಟು ಮತ್ತೊಂದು ಕೈಯಲ್ಲಿ ಎಲ್ಜಿಬಿಟಿಕ್ಯೂ ಧ್ವಜವಾನ್ನು ನೀಡಿ ವಿಕೃತವಾಗಿ ಚಿತ್ರಿಸಲಾಗಿದೆ. ಈ ಮೂಲಕ ಲೀನಾ ಮಣಿಮೇಕಲೈ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ. ಹೀಗಾಗಿ ಕೂಡಲೇ ಅವರ ಸಾಕ್ಷ್ಯ ಚಿತ್ರವನ್ನು ನಿಷೇಧಿಸಬೇಕು. ಹಾಗೂ ಆಕೆಯನ್ನು ಬಂಧಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಬಸವರಾಜ ಬೊಮ್ಮಾಯಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಹಿಂದುಗಳ ತಾಳ್ಮೆಯನ್ನು ದುರುಪಯೋಗ ಮಾಡಿಕೊಳ್ಳಬೇಡಿ : ಸಂತೋಷ್ ಗುರೂಜಿ

ಕಾಳಿಮಾತೆಯನ್ನು ವಿಕೃತವಾಗಿ ಚಿತ್ರಿಸಿರುವ ಲೀನಾ ಮಣಿಮೇಕಲೈ ವಿರುದ್ಧ ಸಂತೋಶ್ ಗುರೂಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಕಾಳಿ ಮಾತೆಗೆ ಸಿಗರೇಟ್ ನೀಡಿ ಚಿತ್ರಿಸಿದ್ದನ್ನು ತೀವ್ರವಾಗಿ ಖಂಡಿಸಿದ ಸ್ವಾಮೀಜಿ, ಮಾದಕ ವಸ್ತುವನ್ನು ಸರ್ಕಾರವೇ ಬ್ಯಾನ್ ಮಾಡಿರುವಾಗ ಈ ನಿರ್ದೇಶಕಿ ದೇವರ ಬಾಯಲ್ಲಿ ಸಿಗರೇಟ್ ನೀಡಿ ಹಿಂದೂಗಳನ್ನು ಪ್ರಚೋದಿಸಿದ್ದಾರೆ. ಹಿಂದೂಗಳು ಶಾಂತಿ ಪ್ರಿಯರು. ಇದರ ದುರುಪಯೋಗಮಾಡುವವರಿಗೆ ಕಠಿಣ ಶಿಕ್ಷೆಯಾಗಬೇಕು. ಸರ್ಕಾರ ಈ ನಿಟ್ಟಿನಲ್ಲಿ ನಿರ್ದೇಶಕಿ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.