ರೈಲು ನಿಲುಗಡೆಯ ಸಮಯ 5ನಿಮಿಷಕ್ಕೆ ಹೆಚ್ಚಳ 

ಸಾಗರ  :  ಸಾಗರದ ಜಂಬಗಾರು ನಿಲ್ದಾಣದಲ್ಲಿ ಫೆಬ್ರವರಿ 10ರಿಂದ ಆಗಸ್ಟ್ 9 ರವರೆಗೆ ಆರು ತಿಂಗಳ ಅವಧಿಗೆ ಪ್ರಾಯೋಗಿಕ ಆಧಾರದ ಮೇಲೆ ಪಾರ್ಸಲ್ ಲೋಡಿಂಗ್‌ಅನ್ನು ಹೆಚ್ಚಿಸಲು ತೀರ್ಮಾನಿಸಿಲಾಗಿದೆ.

ಈ ಹಿನ್ನೆಲೆಯಲ್ಲಿ ಸಾಗರದ ರೈಲ್ವೆ ನಿಲ್ದಾಣದಲ್ಲಿ ಮೈಸೂರು-ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್ ರೈಲಿನ ನಿಲುಗಡೆಯ ಸಮಯವನ್ನ 2 ನಿಮಿಷದಿಂದ 5 ನಿಮಿಷಕ್ಕೆ ಏರಿಸಲಾಗಿದೆ. ಈ ಪ್ರಕಾರ ಸಾಗರ ಜಂಬಗಾರು ರೈಲ್ವೆ ನಿಲ್ದಾಣಕ್ಕೆ ಈ ಮೊದಲು 6.30ಕ್ಕೆ ಆಗಮಿಸಿ 6.32ಕ್ಕೆ ಹೊರಡುತ್ತಿದ್ದ ಮೈಸೂರು-ತಾಳುಗುಪ್ಪ ಎಕ್ಸ್‌ಪ್ರೆಸ್ ರೈಲು ಇನ್ಮುಂದೆ 6.35ಕ್ಕೆ ಹೊರಡಲಿದೆ. ಅದೇ ರೀತಿಯಾಗಿ ಸಾಗರ ಜಂಬಗಾರು ನಿಲ್ದಾಣಕ್ಕೆ ಈ ಮೊದಲು 8.36 ಕ್ಕೆ ಆಗಮಿಸಿ 8.38ಕ್ಕೆ ಹೊರಡುತ್ತಿದ್ದ ತಾಳುಗುಪ್ಪ-ಮೈಸೂರು ಎಕ್ಸ್‌ಪ್ರೆಸ್ ರೈಲು ಇನ್ಮುಂದೆ 8.41ಕ್ಕೆ ಹೊರಡಲಿದೆ.