ತುಮಕೂರು : ಪಠ್ಯದಲ್ಲಿ ಶಿವಕುಮಾರ ಶ್ರೀಗಳ ಜೀವನ ಚರಿತ್ರೆ ಅಳವಡಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದ್ದಾರೆ. ತುಮಕೂರಿನ ಗುರುವಂದನಾ ಕಾರ್ಯಕ್ರಮದಲ್ಲಿ ಬಿ.ಎಸ್. ಯಡಿಯೂರಪ್ಪ ಈ ಬಗ್ಗೆ ಹೇಳಿದ್ದಾರೆ.
ಇಂದು ನಮ್ಮೆಲ್ಲರಿಗೂ ಸೌಭಾಗ್ಯ ದಿನ. ನಡೆದಾಡುವ ದೇವರಾಗಿರುವ ಶಿವಕುಮಾರ ಶ್ರೀಗಳ 115 ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇವೆ. ಜಾತಿ ಭೇದವಿಲ್ಲದೆ ಪ್ರದೇಶ ಭೇದವಿಲ್ಲದೆ ಅವರು ತಮ್ಮ ಸೇವೆ ಮಾಡಿದ್ದಾರೆ. ಹಲವು ಬಾರಿ ನನ್ನನ್ನು ಪೂಜ್ಯರು ಕರೆಸಿಕೊಂಡು ಮಾರ್ಗದರ್ಶನ ಮಾಡಿದ್ದಾರೆ. ಅನ್ನದಾನ ವಿದ್ಯಾದಾನ ಹಲವು ದಾನ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಅಮಿತ್ ಶಾ ಭಾಗಿಯಾಗಿರೋದು ಅರ್ಥಪೂರ್ಣವಾಗಿದೆ. ಪೂಜ್ಯರ ವಿಚಾರವನ್ನು ಪಠ್ಯದಲ್ಲಿ ಅಳವಡಿಸುವ ಬಗ್ಗೆ ಮುಖ್ಯ ಮಂತ್ರಿಗಳಿಗೆ ಮನವಿ ಮಾಡುತ್ತೆನೆ ಎಂದು ಯಡಿಯೂರಪ್ಪ ಹೇಳಿದ್ದಾರೆ.