ಶಿವಮೊಗ್ಗ : ಒಂದು ಸಾವಿರ ಆಸನಗಳು, ೨೪ ರೂಂಗಳು ಹಾಗೂ ಹಲವು ವಿಶೇಷ ಸೌಕರ್ಯಗಳನ್ನು ಒಳಗೊಂಡ ಶುಭಶ್ರೀ ಸಮುದಾಯ ಭವನ ಲೋಕಾರ್ಪಣೆಗೊಂಡಿದೆ. ಪೇಸ್ ಕಾಲೇಜು ಹಿಂಭಾಗದ ತರಳಬಾಳು ಬಡಾವಣೆಯಲ್ಲಿ ಶ್ರೀ ಕನಕದಾಸ ಸೇವಾ ಟ್ರಸ್ಟ್‌ನಿಂದ ಈ ಸಮುದಾಯ ಭವನವನ್ನು ನಿರ್ಮಿಸಲಾಗಿದೆ, ಗೋ ಮಾತೆಗೆ ಪೂಜೆ ಸಲ್ಲಿಸುವ ಮೂಲಕ ಸಚಿವ ಕೆ.ಎಸ್.ಈಶ್ವರಪ್ಪ ಸಮುದಾಯ ಭವನವನ್ನು ಉದ್ಘಾಟಿಸಿದರು.
ಈ ವೇಳೆ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇನ್ನು, ಕಾರ್ಯಕ್ರದಮ ದಿವ್ಯ ಸಾನಿಧ್ಯವನ್ನು ಕಾಗಿನೆಲೆ ಮಹಾಸಂಸ್ಥಾನ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಹೊಸದುರ್ಗ ಕಾಗಿನೆಲೆ ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಆನಂದಪುರಂ ಮುರಾಘ ಮಠದ ಡಾ.ಶ್ರೀ ಮಲ್ಲಿಕಾರ್ಜಿನ ಮುರುಘರಾಜೇಂದ್ರ ಮಹಾಸ್ವಾಮಿ, ನಾಗಮಂಗಲ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹಾಗೂ ಬಸವಕೇಂದ್ರದ ಶ್ರೀ ಬಸವ ಮರುಳಸಿದ್ದ ಮಹಾಸ್ವಾಮೀಜಿ ವಹಿಸಿಕೊಂಡಿದ್ದರು.