ಜನವರಿ ಮೊದಲ ಅಥವಾ ಎರಡನೇ ವಾರದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ

ಹೈಲೆಟ್ಸ್ : 

ಫೆಬ್ರವರಿಯಲ್ಲಿ ನೀತಿ ಸಂಹಿತಿ ಜಾರಿ ಸಾಧ್ಯತೆ
ಅಷ್ಟೊರಳಗೆ ವಿಮಾನ ನಿಲ್ದಾಣ ಉದ್ಘಾಟನೆಗೆ ಕ್ರಮ
ಅಧಿಕಾರಿಗಳು ಸಹಕಾರ ನೀಡಬೇಕೆಂದು ಸಂಸದರ ಮನವಿ

ಶಿವಮೊಗ್ಗ :  ಜನರ ಬಹುದಿನದ ಕನಸು ವಿಮಾನ ನಿಲ್ದಾಣ. ಇನ್ನೇನು ಡಿಸೆಂಬರ್‌ನಲ್ಲಿ ಲೋಕಾರ್ಪಣೆಯಾಗುತ್ತೆ ನಾವೆಲ್ಲರೂ ಜುಮ್ ಅಂತ ಹಾರಾಡಬಹುದು ಅಂತ ಜನ ಅಂದುಕೊಂಡಿದ್ದರು. ಆದ್ರೆ, ಉಕ್ಕಿನ ಹಕ್ಕಿಗಳ ಹಾರಾಟ ಸ್ವಲ್ಪ ತಡವಾಗಬಹುದು. ಹೌದು, ಜನವರಿ ಮೊದಲ ಅಥವಾ ಎರಡನೇ ವಾರದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದ ಉದ್ಘಾಟನಾ ಕಾರ್ಯಕ್ರಮವನ್ನು ಮಾಡಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಸಹಕಾರ ನೀಡಬೇಕೆಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೆಲ್ವಕುಮಾರ್, ಹಾಗೂ ದೆಹಲಿ ವಿಮಾನಯಾನ ಸಂಸ್ಥೆಯ ಉನ್ನತ ಮಟ್ಟದ ಅಧಿಕಾರಿಗಳ ತಂಡ ಸೋಗಾನೆ ವಿಮಾನ ನಿಲ್ದಾಣದ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಸಂಸದರು ಪೆಬ್ರವರಿಯಲ್ಲಿ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆಯಿದೆ. ಹೀಗಾಗಿ ಅಷ್ಟರೊಳಗೆ ನಿಲ್ದಾಣದ ಉದ್ಘಾಟನೆ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳ ಸಹಕಾರ ಬೇಕು. ವಿಮಾನ ನಿಲ್ದಾಣದ ಮೆಂಟೆನೆನ್ಸ್, ಆಪರೇಷನ್ ಹಾಗೂ ಕನೆಕ್ಟಿವಿಟಿ ವಿಚಾರವಾಗಿ ಕೇಂದ್ರ ವಿಮಾನಯಾನ ಸಚಿವರು ಗಮನಹರಿಸಬೇಕು ಎಂದು ವಿನಂತಿಸಿಕೊಂಡರು.