ಹೈಲೆಟ್ಸ್:
ಅಕ್ರಮ ಪಡಿತರ ಅಕ್ಕಿ ಸಂಗ್ರಹ
ಇಬ್ಬರು ಆರೋಪಿಗಳು ಪೊಲೀಸ್ ವಶ
೧.೭೬ ಲಕ್ಷ ಮೌಲ್ಯದ ೮೦ ಕ್ವಿಂಟಲ್ ಪಡಿತರ ಅಕ್ಕಿ ವಶ
ಒಂದು ಕ್ಯಾಂಟರ್ ವಾಹನ ವಶ
ಹೈಲೆಟ್ಸ್:
ಅಕ್ರಮವಾಗಿ ಪಡಿತರ ಅಕ್ಕಿಯನ್ನ ತೋಟವೊಂದರಲ್ಲಿ ಸಂಗ್ರಹಿಸಿಕೊಂಡು ಸಾಗಾಣಿಕೆ ಮಾಡಲು ಸಜ್ಜಾಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಲೆಗೆ ಬೀಳಿಸಿಕೊಂಡಿದ್ದಾರೆ. ಭದ್ರಾವತಿ ಗ್ರಾಮಾಂತರ ಪೊಲೀಸರು ಆರೋಪಿಗಳಿಂದ ೧.೭೬ ಲಕ್ಷ ಮೌಲ್ಯದ ೮೦ ಕ್ಚಿಂಟಾಲ್ ಅಕ್ಕಿಯನ್ನ ವಶಕ್ಕೆ ಪಡೆದಿದ್ದಾರೆ. ಭದ್ರಾವತಿಯ ಮಜ್ಜಿಗೆನಹಳ್ಳಿ ಗ್ರಾಮದ ಅಡಿಕೆ ತೋಟದಲ್ಲಿ ಮೊಹಮ್ಮದ್ ಸಮೀರ್ ಎಂಬ ವ್ಯಕ್ತಿಯು ಪಡಿತರ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡಲು, ಸಂಗ್ರಹಿಸಿ ಕ್ಯಾಂಟರ್ ವಾಹನಕ್ಕೆ ಲೋಡ್ ಮಾಡುತ್ತಿದನು.
ಖಚಿತ ಮಾಹಿತಿಯ ಮೇರೆಗೆ ಭದ್ರಾವತಿ ಗ್ರಾಮಾಂತರ ಪೊಲೀಸ್ ತಂಡ ದಾಳಿ ನಡೆಸಿದ್ದಾರೆ. ಅಕ್ರಮವಾಗಿ ಪಡಿತರ ಅಕ್ಕಿಯನ್ನು ಕ್ಯಾಂಟರ್ ವಾಹನಕ್ಕೆ ಲೋಡ್ ಮಾಡುತ್ತಿದ್ದ ಆರೋಪಿತರಾದ ವೀರಾಪುರ ಗ್ರಾಮದ ಮೊಹಮ್ಮದ್ ಸಮೀರ್ ಮತ್ತು ವಾಹನದ ಚಾಲಕನಾದ ಪರ್ವೇಜ್ ಪಾಷರನ್ನು ದಸ್ತಗಿರಿ ಮಾಡಿ, ೧೬೦ ಚೀಲಗಳಲ್ಲಿ ತುಂಬಿದ್ದ ಅಂದಾಜು ೧.೭೬ ಲಕ್ಷ ಮೌಲ್ಯದ ೮೦ ಕ್ವಿಂಟಲ್ ಪಡಿತರ ಅಕ್ಕಿಯನ್ನು ಮತ್ತು ಕೃತ್ಯಕ್ಕೆ ಬಳಸಿದ ಒಂದು ಕ್ಯಾಂಟರ್ ವಾಹನವನ್ನು ವಶ ಪಡಿಸಿಕೊಳ್ಳಲಾಗಿದೆ.