ಶಿವಮೊಗ್ಗ : ಅತಿಥಿ ಉಪನ್ಯಾಸಕರಿಗೆ ರಾಜ್ಯ ಸರ್ಕಾರ ಘೋಷಿಸಿದ್ದ ಸೌಲಭ್ಯದ ಪ್ಯಾಕೇಜ್ ವಾಪಸ್ ಪಡೆಯುವಂತೆ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಮನ್ವಯ ಸಮಿತಿ ಆಗ್ರಹಿಸಿದೆ.
ಈ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಮನ್ವಯ ಸಮಿತಿಯ ರಾಜ್ಯಾಧ್ಯಕ್ಷ ಸೋಮಶೇಖರ್ ಸಿಹಿಮೊಗ್ಗಿ, ರಾಜ್ಯ ಸರ್ಕಾರ ಘೋಷಿಸಿರುವ ಪ್ಯಾಕೇಜ್‌ನಿಂದ ಅನೇಕ ಅತಿಥಿ ಉಪನ್ಯಾಸಕರು ಬೀದಿಗೆ ಬೀಳಲಿದ್ದಾರೆ.
15 ರಿಂದ 20 ವರ್ಷ ಕೆಲಸ ಮಾಡಿಕೊಂಡು ಬಂದ ಅತಿಥಿ ಉಪನ್ಯಾಸಕರಿಗೆ ಪಿಎಫ್, ಇಎಸ್‌ಐ ಇಲ್ಲದೆ ಬರಿಗೈಯಲಿ ಮನೆಗೆ ಹೋಗಬೇಕಿದೆ. ಹೀಗಾಗಿ ಅತಿಥಿ ಉಪನ್ಯಾಸಕರ ಅನ್ನ ಕಿತ್ತುಕೊಳ್ಳಲು ಮುಂದಾಗಿರುವ ಸರ್ಕಾರವು ಈ ಪ್ಯಾಕೇಜ್ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಪ್ಯಾಕೇಜ್ ಹಿಂಪಡೆಯದಿದ್ದಲ್ಲಿ ತರಗತಿ ಬಹಿಷ್ಕರಿಸಿ ಸಚಿವರ ಮನೆಯ ಮುಂದೆ ಧರಣಿ ಕೂರಲಿದ್ದೇವೆ ಎಂದು ಎಚ್ಚರಿಸಿದ್ದಾರೆ.