ನದಿ ಜೋಡಣೆ ವಿಚಾರಕ್ಕೆ ನನ್ನ ಸ್ವಾಗತವಿದೆ : ಕೆಎಸ್‌ಈ 

ಶಿವಮೊಗ್ಗ : ನದಿ ಜೋಡಣೆ ಕುರಿತಾಗಿ ತಜ್ಞರ ಜೊತೆ ಚರ್ಚಿಸಿ ನಾವು ತೀರ್ಮಾನ ತೆಗೆದುಕೊಳ್ಳತ್ತೇನೆ. ನಾವು ನಮ್ಮ ರಾಜ್ಯಕ್ಕೆ ಮಾಡಿ ಬೇರೆ ರಾಜ್ಯಕ್ಕೆ ಕೊಡ್ತೀವಿ ಅಂತ ನಾವೇನು ಸಚಿವ ಸಂಪುಟದಲ್ಲೂ ಚರ್ಚೆ ಮಾಡಿಲ್ಲ.

ಅದೇ ರೀತಿಯಾಗಿ ಬಜೆಟ್‌ನಲ್ಲಿ ಕೂಡ ಘೋಷಣೆ ಮಾಡಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಈ ಕುರಿತಾಗಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ನೀರು, ರೈತರ ಉಪಯೋಗಕ್ಕೆ ಬರಬೇಕು. ರಾಷ್ಟ್ರದ ಹಿತ ದೃಷ್ಟಿಯಿಂದ ಕೇಂದ್ರ ಸರ್ಕಾರ ಈ ನಿರ್ದಾರ ತೆಗೆದುಕೊಂಡಿದೆ. ನದಿ ಜೋಡಣೆ ವಿಚಾರವನ್ನ ನಾನು ಸಂಪೂರ್ಣವಾಗಿ ಸ್ವಾಗತ ಮಾಡುತ್ತೇನೆ. ಹಾಗಂತ ಇದರಿಂದಾಗಿ ಕರ್ನಾಟಕ ರಾಜ್ಯಕ್ಕೆ ಅನ್ಯಾಯವಾಗುವುದಾದರೆ, ಈ ಕುರಿತು ತಜ್ಞರ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು