ಪ್ರತಿ ಮನೆಯಲ್ಲೂ ನಾನು ಹರ್ಷನನ್ನು ಕಾಣುತ್ತಿದ್ದೇನೆ 

ಶಿವಮೊಗ್ಗ : ಪ್ರತಿಯೊಬ್ಬರಲ್ಲೂ ನಾನು ಹರ್ಷನನ್ನು ಕಾಣುತ್ತಿದ್ದೇನೆ. ಪ್ರತಿ ಮನೆಯಲ್ಲೂ ನಾನು ಹರ್ಷನನ್ನು ಕಾಣುತ್ತಿದ್ದೇನೆ ಎಂದು ಹರ್ಷ ತಾಯಿ ಪದ್ಮ ಹೇಳಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಎಲ್ಲರೂ ನಮಗೆ ಧೈರ್ಯ ತುಂಬುತ್ತಿದ್ದಾರೆ. ಹರ್ಷ ದೇಶಕ್ಕಾಗಿಯೇ ಬಂದ, ದೇಶಕ್ಕಾಗಿಯೇ ಹೋದ ಎಂದರು. ನಂತರ ಮಾತನಾಡಿದ ಹರ್ಷ ಅಕ್ಕ ಅಶ್ವಿನಿ, ಎಲ್ಲರೂ ತುಂಬಾ ಸಹಕಾರ ನೀಡಿದ್ದೀರಿ. ಪ್ರತಿಯೊಬ್ಬರಲ್ಲೂ ಹರ್ಷ ಕಾಣ್ತಾ ಇದ್ದಾನೆ. ಹರ್ಷನ ನೆನಪು ಬಾರದ ರೀತಿಯಲ್ಲಿ ಪ್ರೀತಿ ತೋರುತ್ತಿದ್ದೀರಿ ಎಂದು ಹೇಳಿದರು.